* ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಬಾಹ್ಯಾಕಾಶ ಪ್ರಯಾಣ (manned space mission) ʼಗಗನಯಾನʼದ (Gaganyaan) ʼಅಬಾರ್ಟ್ ಟೆಸ್ಟ್ ಡೆಮೊʼ (abort test demo- ನೌಕೆ ಸ್ಥಗಿತ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ) ಅಕ್ಟೋಬರ್ ತಿಂಗಳ 25ರಂದು ನಡೆಸಲು ಉದ್ದೇಶಿಸಲಾಗಿದೆ.
* ಅಕ್ಟೋಬರ್ 25ರ ಸುಮಾರಿಗೆ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ- ISRO) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಮಿಷನ್ ಅನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ಯಲಿದೆ.
* “ಮಿಷನ್ ತಯಾರಿ ಯೋಜನೆಯ ಪ್ರಕಾರ ನಡೆಯುತ್ತಿದೆ. ನಾವು ಅಕ್ಟೋಬರ್ 25ರ ಸುಮಾರಿಗೆ ನೌಕೆ ಸ್ಥಗಿತಗೊಳಿಸುವ ಪರೀಕ್ಷಾ ಪ್ರದರ್ಶನವನ್ನು ಗುರಿಯಾಗಿರಿಸಿಕೊಂಡಿದ್ದೇವೆ. ಅದನ್ನು ಸಾಧಿಸಿದ ನಂತರ ನಾವು ಮಾನವರಹಿತ ಕಾರ್ಯಾಚರಣೆಯ ಸಿದ್ಧತೆಗಳನ್ನು ನಡೆಸುತ್ತೇವೆ” ಎಂದು ಇಸ್ರೋ ಅಧಿಕಾರಿ ಹೇಳಿದ್ದಾರೆ.
ಮಾನವಸಹಿತ ಗಗನಯಾನ ಹಾರಾಟಕ್ಕೆ ಇಸ್ರೋ ಸಿದ್ಧತೆ
Published by Bhagya R K
09 ಅಕ್ಟೋಬರ್ 2023