➤ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನ (International Literacy Day) ಅನ್ನು ಆಚರಿಸಲಾಗುತ್ತದೆ. ಸಾಕ್ಷರತೆಯು ಕೇವಲ ಓದು ಮತ್ತು ಬರಹ ಕಲಿಯುವುದಕ್ಕೆ ಮಾತ್ರ ಸೀಮಿತವಾಗಿರದೆ, ಮಾನವ ಹಕ್ಕು, ಗೌರವ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಭೂತ ಅಡಿಪಾಯವಾಗಿದೆ ಎಂಬುದನ್ನು ಜಗತ್ತಿಗೆ ನೆನಪಿಸಲು ಈ ದಿನವನ್ನು ಮೀಸಲಿಡಲಾಗಿದೆ.
➤ ಧೈಯವಾಕ್ಯ: "ಜನರು, ಭೂಮಿ ಮತ್ತು ಸಮೃದ್ಧಿಗಾಗಿ ಸಾಕ್ಷರತೆ" ("Literacy for people, the planet and prosperity").
➤ ಆರಂಭಿಕ ಚಿಂತನೆ: 1965ರಲ್ಲಿ ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ "ನಿರಕ್ಷರತಾ ನಿರ್ಮೂಲನೆ ಕುರಿತ ವಿಶ್ವ ಶಿಕ್ಷಣ ಸಚಿವರ ಸಮ್ಮೇಳನ" (World Conference of Ministers of Education on the Eradication of Illiteracy) ದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಪರಿಕಲ್ಪನೆ ಮೊದಲ ಬಾರಿಗೆ ಮೊಳಕೆಯೊಡೆಯಿತು.
➤ ಯುನೆಸ್ಕೋ ಘೋಷಣೆ: ಯುನೆಸ್ಕೋ (UNESCO) ಸಂಸ್ಥೆಯು 1966ರ ಅಕ್ಟೋಬರ್ 26 ರಂದು ನಡೆದ ತನ್ನ 14ನೇ ಮಹಾ ಅಧಿವೇಶನದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 8 ರಂದು 'ಅಂತರರಾಷ್ಟ್ರೀಯ ಸಾಕ್ಷರತಾ ದಿನ'ವಾಗಿ ಆಚರಿಸಲು ಅಧಿಕೃತವಾಗಿ ಘೋಷಿಸಿತು.ಮೊದಲ ಆಚರಣೆ: ಯುನೆಸ್ಕೋ ಘೋಷಣೆಯ ನಂತರ, 1967ರ ಸೆಪ್ಟೆಂಬರ್ 8 ರಂದು ಪ್ರಪಂಚದಾದ್ಯಂತ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು.
➤ ಜಾಗತಿಕ ಸಾಕ್ಷರತಾ ಅಂಕಿ-ಅಂಶಗಳು (UNESCO ವರದಿ)
- ಜಾಗತಿಕ ಸಾಕ್ಷರತಾ ಪ್ರಮಾಣ: ಸುಮಾರು 88% ಕ್ಕಿಂತ ಹೆಚ್ಚು
- ಮೂಲಭೂತ ಕೌಶಲ್ಯವಿಲ್ಲದವರು: ವಿಶ್ವದಾದ್ಯಂತ 739 ಮಿಲಿಯನ್‌ಗೂ ಹೆಚ್ಚು ಯುವಕರು ಮತ್ತು ವಯಸ್ಕರು ಮೂಲಭೂತ ಸಾಕ್ಷರತೆಯಿಂದ ವಂಚಿತರಾಗಿದ್ದಾರೆ.
- ಮಕ್ಕಳ ಸ್ಥಿತಿ: ಪ್ರತಿ 10 ಮಕ್ಕಳಲ್ಲಿ 4 ಮಕ್ಕಳು ಕನಿಷ್ಠ ಓದುವ ಪ್ರಾವೀಣ್ಯತೆಯನ್ನು ತಲುಪುತ್ತಿಲ್ಲ.
ಮಂಗಳವಾರ, 08 ಸೆಪ್ಟೆಂಬರ್ 2026
10:16 ಪೂರ್ವಾಹ್ನ
Daily PDF
ಸೆಪ್ಟೆಂಬರ್-8: ಜಾಗತಿಕ ಸಾಕ್ಷರತಾ ದಿನ
Authored by:
Yallamma G