➤ ಜಾಗತಿಕ ವ್ಯಾಪಾರ ರಂಗದಲ್ಲಿ ಭಾರತ ತನ್ನ ಆರ್ಥಿಕ ಮುದ್ರೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್ವರೆಗಿನ ಮೊದಲ ಐದು ತಿಂಗಳುಗಳಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಮೂಲ ಸದಸ್ಯ ರಾಷ್ಟ್ರಗಳಿಗೆ ಭಾರತದ ರಫ್ತು ವಹಿವಾಟು ಗಣನೀಯವಾಗಿ ಹೆಚ್ಚಳ ಕಂಡಿದೆ.

  • ಒಟ್ಟು ರಫ್ತು ಮೌಲ್ಯ: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಭಾರತದ ರಫ್ತು $19.9 ಶತಕೋಟಿ (USD) ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು $14.9 ಶತಕೋಟಿಯಾಗಿತ್ತು.
  • ಒಟ್ಟಾರೆ ಏರಿಕೆ: ಕೋರ್ ಬ್ರಿಕ್ಸ್ ಮಾರುಕಟ್ಟೆಗಳಿಗೆ ನಡೆದ ರಫ್ತಿನಲ್ಲಿ ಶೇಕಡಾ 34ರಷ್ಟು ಭಾರಿ ಪ್ರಗತಿ ಕಂಡುಬಂದಿದೆ.
  • ಭಾರತದ ಒಟ್ಟು ರಫ್ತಿನಲ್ಲಿ ಪಾಲು: ಭಾರತ ಮಾಡಲಾದ ಒಟ್ಟು ರಫ್ತಿನಲ್ಲಿ ಈ ನಾಲ್ಕು ರಾಷ್ಟ್ರಗಳ ಪಾಲು ಶೇ. 8.1 ರಿಂದ ಶೇ. 9.2ಕ್ಕೆ ಏರಿಕೆಯಾಗಿದೆ.

ದೇಶಾವಾರು ರಫ್ತು ವಿಶ್ಲೇಷಣೆ (Country-wise Breakdown):
1. ಚೀನಾ (China): ಬ್ರಿಕ್ಸ್ ಒಕ್ಕೂಟದಲ್ಲಿ ಭಾರತದ ಸರಕುಗಳಿಗೆ ಚೀನಾ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಚೀನಾಕ್ಕೆ ನಡೆದ ರಫ್ತು ಶೇ. 39ರಷ್ಟು ಏರಿಕೆಯಾಗಿ $9.6 ಶತಕೋಟಿ ಗೆ ತಲುಪಿದೆ.   
2. ದಕ್ಷಿಣ ಆಫ್ರಿಕಾ (South Africa): ಅತಿ ವೇಗದ ಬೆಳವಣಿಗೆಯನ್ನು ದಾಖಲಿಸಿದ್ದು, ರಫ್ತಿನಲ್ಲಿ ಶೇ. 58ರಷ್ಟು ಭಾರಿ ಜಿಗಿತ ಕಂಡುಬಂದಿದೆ.   
3. ಬ್ರೆಜಿಲ್ ಮತ್ತು ರಷ್ಯಾ (Brazil & Russia): ಬ್ರೆಜಿಲ್‌ಗೆ ಶೇಕಡಾ 13% ಹಾಗೂ ರಷ್ಯಾಗೆ ಶೇಕಡಾ 11% ನಷ್ಟು ಸ್ಥಿರವಾದ ಎರಡಂಕಿ ಬೆಳವಣಿಗೆಯನ್ನು ಸಾಧಿಸಲಾಗಿದೆ.   
ಇತರ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಸಾಧನೆ:

ದೇಶ ರಫ್ತು ಏರಿಕೆ (%) ಒಟ್ಟು ಮೌಲ್ಯ (USD) ಪ್ರಮುಖ ರಫ್ತು ಉತ್ಪನ್ನಗಳು
ಜಪಾನ್ (Japan) 43% $3.43 ಶತಕೋಟಿ ಖನಿಜ ಇಂಧನಗಳು ( Mineral Fuels - 76% ಏರಿಕೆ), ಎಲೆಕ್ಟ್ರಾನಿಕ್ಸ್, ಅಲ್ಯೂಮಿನಿಯಂ
ಇಟಲಿ (Italy) 30% $3.92 ಶತಕೋಟಿ ಜವಳಿ, ಕೈಗಾರಿಕಾ ಕಚ್ಚಾ ವಸ್ತುಗಳು, ಯಂತ್ರೋಪಕರಣಗಳು
ದಕ್ಷಿಣ ಕೊರಿಯಾ (South Korea) 22% $3.21 ಶತಕೋಟಿ ಕೈಗಾರಿಕಾ ಕಚ್ಚಾ ವಸ್ತುಗಳು, ಇಂಧನ ಉತ್ಪನ್ನಗಳು, ಮಧ್ಯಂತರ ಸರಕುಗಳು

ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ