➤ ಡೆನ್ಮಾರ್ಕ್ (ಕೋಪನ್ ಹೇಗನ್): ಜರ್ಮನಿಯ ರಕ್ಷಣಾ ಪಡೆಗಳ ಮುಖ್ಯಸ್ಥ (General Inspector of the Bundeswehr) ಜನರಲ್ ಕಾರ್ಸ್ಟನ್ ಬ್ರೂವರ್ (General Carsten Breuer) ಅವರು ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯ (NATO) ಮಿಲಿಟರಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ನಡೆದ ನ್ಯಾಟೋ ಸದಸ್ಯ ರಾಷ್ಟ್ರಗಳ 32 ಸೇನಾ ಮುಖ್ಯಸ್ಥರ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
➤ ಪ್ರಸ್ತುತ ನ್ಯಾಟೋ ಮಿಲಿಟರಿ ಸಮಿತಿಯ ಅಧ್ಯಕ್ಷರಾಗಿರುವ ಇಟಲಿಯ ಅಡ್ಮಿರಲ್ ಗೂಸೆಪ್ಪೆ ಕಾವೊ ಡ್ರಾಗೋನ್ (Giuseppe Cavo Dragone) ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 61 ವರ್ಷದ ಜನರಲ್ ಬ್ರೂವರ್ ಅವರು 2027ರ ಜುಲೈನಲ್ಲಿ ಡ್ರಾಗೋನ್ ಅವರ ಉತ್ತರಾಧಿಕಾರಿಯಾಗಿ 3 ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
➤ ಹುದ್ದೆಯ ಮಹತ್ವ ಮತ್ತು ಜವಾಬ್ದಾರಿಗಳು: ನ್ಯಾಟೋ ಮಿಲಿಟರಿ ಸಮಿತಿಯ ಅಧ್ಯಕ್ಷರ ಹುದ್ದೆಯು ಸಂಸ್ಥೆಯ ಅತ್ಯುನ್ನತ ಮಿಲಿಟರಿ ಅಧಿಕಾರವಾಗಿದೆ.
- ರಾಜಕೀಯ ಹಾಗೂ ಮಿಲಿಟರಿ ಸಲಹೆಗಾರ: ಹೊಸ ಹುದ್ದೆಯಲ್ಲಿ ಬ್ರೂವರ್ ಅವರು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರೇಟ್ (Mark Rutte) ಹಾಗೂ ರಾಜಕೀಯ ನಾಯಕತ್ವಕ್ಕೆ ಪ್ರಮುಖ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
- ಭದ್ರತಾ ಸವಾಲುಗಳ ನಿರ್ವಹಣೆ: ಉಕ್ರೇನ್ ಮೇಲಿನ ರಷ್ಯಾದ ಸುದೀರ್ಘ ಆಕ್ರಮಣ, ಯುರೋ-ಅಟ್ಲಾಂಟಿಕ್ ವಲಯದ ಭದ್ರತಾ ಬಿಕ್ಕಟ್ಟು ಹಾಗೂ ಜಾಗತಿಕ ಭೌಗೋಳಿಕ-ರಾಜಕೀಯ ಬದಲಾವಣೆಗಳ ನಡುವೆ ಈ ನಾಯಕತ್ವದ ಬದಲಾವಣೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
- ಸದಸ್ಯ ರಾಷ್ಟ್ರಗಳ ಸೇನಾ ಸಮನ್ವಯ: ನ್ಯಾಟೋದ 32 ಸದಸ್ಯ ರಾಷ್ಟ್ರಗಳ ಮಿಲಿಟರಿ ಶಿಫಾರಸುಗಳನ್ನು ಕ್ರೋಢೀಕರಿಸಿ ರಾಜಕೀಯ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಿಗೆ ತಲುಪಿಸುವುದು ಇವರ ಪ್ರಮುಖ ಜವಾಬ್ದಾರಿಯಾಗಿದೆ.
➤ ಜನರಲ್ ಬ್ರೂವರ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಜರ್ಮನಿಯ ರಾಷ್ಟ್ರೀಯ ಲಸಿಕಾ ಹಾಗೂ ಬಿಕ್ಕಟ್ಟು ನಿರ್ವಹಣಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಜಾಗತಿಕ ಗಮನ ಸೆಳೆದಿದ್ದರು. ಅವರ ದೀರ್ಘಕಾಲದ ಮಿಲಿಟರಿ ಸೇವೆ ಮತ್ತು ಬಿಕ್ಕಟ್ಟು ನಿರ್ವಹಣಾ ಸಾಮರ್ಥ್ಯವನ್ನು ಪರಿಗಣಿಸಿ ಈ ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಸೋಮವಾರ, 21 ಸೆಪ್ಟೆಂಬರ್ 2026
3:11 ಅಪರಾಹ್ನ
Daily PDF
ನ್ಯಾಟೋ ಮಿಲಿಟರಿ ಸಮಿತಿಯ ನೂತನ ಅಧ್ಯಕ್ಷರಾಗಿ ಜರ್ಮನಿಯ ಜನರಲ್ ಕಾರ್ಸ್ಟನ್ ಬ್ರೂವರ್ ಆಯ್ಕೆ
Authored by:
Akshata Halli