➤ ಪ್ರತಿ ವರ್ಷ ಸೆಪ್ಟೆಂಬರ್ 22 ರಂದು ವಿಶ್ವದಾದ್ಯಂತ ವಿಶ್ವ ಗೇಂಡಾಮೃಗ ದಿನಾಚರಣೆ (World Rhino Day) ಯನ್ನು ಆಚರಿಸಲಾಗುತ್ತದೆ. ಭೂಮಿಯ ಮೇಲಿರುವ ಐದೂ ಜಾತಿಯ ಗೇಂಡಾಮೃಗಗಳ (Rhinoceros) ಸಂರಕ್ಷಣೆ, ಕಾನೂನುಬಾಹಿರ ಬೇಟೆ (Poaching) ತಡೆಯುವಿಕೆ ಹಾಗೂ ಅವುಗಳ ನಿಸರ್ಗದತ್ತ ಆವಾಸಸ್ಥಾನಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
➤ 2026 ರ ಧೇಯವಾಕ್ಯ (Theme): “Keep the Five Alive” (ಐದನ್ನೂ ಜೀವಂತವಾಗಿರಿಸಿ)
➤ 2010 ರಲ್ಲಿ ಪ್ರಾರಂಭ: ದಕ್ಷಿಣ ಆಫ್ರಿಕಾದ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF-South Africa) ಸಂಸ್ಥೆಯು ಮೊದಲ ಬಾರಿಗೆ ಸೆಪ್ಟೆಂಬರ್ 22 ಅನ್ನು 'ಗೇಂಡಾಮೃಗ ದಿನ'ವನ್ನಾಗಿ ಘೋಷಿಸಿತು. 2011 ರಲ್ಲಿ ಅಂತರರಾಷ್ಟ್ರೀಯ ಮಾನ್ಯತೆ: ಪರಿಸರ ಪ್ರೇಮಿಗಳಾದ ಲಿಸಾ ಜೇನ್ ಕ್ಯಾಂಪ್‌ಬೆಲ್ (Lisa Jane Campbell) ಮತ್ತು ರಿಶ್ಜಾ ಕೋಟಾ (Rhishja Cota) ಅವರ ಪ್ರಯತ್ನದಿಂದಾಗಿ ಆಫ್ರಿಕಾ ಮತ್ತು ಏಷ್ಯಾದ ಎಲ್ಲಾ ಗೇಂಡಾಮೃಗ ತಳಿಗಳನ್ನು ಒಳಗೊಂಡಂತೆ ಇದು ಅಂತರರಾಷ್ಟ್ರೀಯ ಆಚರಣೆಯಾಗಿ ರೂಪಾಂತರಗೊಂಡಿತು.
➤ ವಿಶ್ವದ 5 ಗೇಂಡಾಮೃಗ ತಳಿಗಳು ಮತ್ತು ಅವುಗಳ ಆವಾಸಸ್ಥಾನಗಳು: ಪ್ರಸ್ತುತ ಜಗತ್ತಿನಲ್ಲಿ ಕೇವಲ 5 ತಳಿಯ ಗೇಂಡಾಮೃಗಗಳು ಜೀವಂತವಾಗಿವೆ. ಇವುಗಳಲ್ಲಿ 2 ಆಫ್ರಿಕಾ ಖಂಡದಲ್ಲಿ ಮತ್ತು 3 ಏಷ್ಯಾ ಖಂಡದಲ್ಲಿ ಕಂಡುಬರುತ್ತವೆ:
| ಗೇಂಡಾಮೃಗದ ತಳಿ | ಖಂಡ / ಪ್ರಮುಖ ಪ್ರದೇಶ | IUCN ಸಂರಕ್ಷಣಾ ಸ್ಥಿತಿ (IUCN Status) |
| ಬಿಳಿ ಗೇಂಡಾಮೃಗ (White Rhino) | ಆಫ್ರಿಕಾ | ಸೆಂಟ್‌ಗೆ ಹತ್ತಿರದಲ್ಲಿದೆ (Near Threatened) |
| ಕಪ್ಪು ಗೇಂಡಾಮೃಗ (Black Rhino) | ಆಫ್ರಿಕಾ | ಗಂಭೀರ ಅಳಿವಿನಂಚಿನಲ್ಲಿದೆ (Critically Endangered) |
| ಒಂದು ಕೊಂಬಿನ ಗೇಂಡಾಮೃಗ (Greater One-Horned Rhino) | ಭಾರತ ಮತ್ತು ನೇಪಾಳ | ಅಳಿವಿನಂಚಿನಲ್ಲಿದೆ (Vulnerable) |
| ಜಾವನ್ ಗೇಂಡಾಮೃಗ (Javan Rhino) | ಇಂಡೋನೇಷ್ಯಾ | ಗಂಭೀರ ಅಳಿವಿನಂಚಿನಲ್ಲಿದೆ (Critically Endangered) |
| ಸುಮಾತ್ರನ್ ಗೇಂಡಾಮೃಗ (Sumatran Rhino) | ಇಂಡೋನೇಷ್ಯಾ | ಗಂಭೀರ ಅಳಿವಿನಂಚಿನಲ್ಲಿದೆ (Critically Endangered) |
➤ ಅಂತರರಾಷ್ಟ್ರೀಯ ಗೇಂಡಾಮೃಗ ಫೌಂಡೇಶನ್ (International Rhino Foundation - IRF) ಬಿಡುಗಡೆ ಮಾಡಿದ 2026 ರ ವರದಿಯ ಮುಖ್ಯಾಂಶಗಳು:
- ಒಟ್ಟು ಸಂಖ್ಯೆ: ಪ್ರಪಂಚದಾದ್ಯಂತ ಪ್ರಸ್ತುತ ಸುಮಾರು 26,700 ಗೇಂಡಾಮೃಗಗಳಿವೆ.
- ಭಾರತದ ಒಂದು ಕೊಂಬಿನ ಗೇಂಡಾಮೃಗಗಳ ಪ್ರಗತಿ: ಭಾರತ ಮತ್ತು ನೇಪಾಳದಲ್ಲಿರುವ 'ಗ್ರೇಟರ್ ಒನ್-ಹಾರ್ನ್ಡ್' ಗೇಂಡಾಮೃಗಗಳ ಸಂಖ್ಯೆ 4,075 ಕ್ಕೆ ಏರಿಕೆಯಾಗಿದೆ. 20 ನೇ ಶತಮಾನದ ಆರಂಭದಲ್ಲಿ ಇವುಗಳ ಸಂಖ್ಯೆ ಕೇವಲ 200 ಕ್ಕೆ ಕುಸಿದಿತ್ತು.
➤ ಭಾರತ ಮತ್ತು ಒಂದು ಕೊಂಬಿನ ಗೇಂಡಾಮೃಗ:
- ಪ್ರಮುಖ ಆವಾಸಸ್ಥಾನ: ಭಾರತದಲ್ಲಿ ಶೇಕಡಾ 70 ಕ್ಕೂ ಹೆಚ್ಚು ಗೇಂಡಾಮೃಗಗಳು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿದ್ದರೆ (Kaziranga National Park), ಉಳಿದಂತೆ ಪೋಬಿಟೋರಾ, ಒರಾಂಗ್, ಮಾನಸ್ (ಅಸ್ಸಾಂ) ಹಾಗೂ ಜಲ್ದಾಪಾರ, ಗೋರುಮಾರ (ಪಶ್ಚಿಮ ಬಂಗಾಳ) ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಂಡುಬರುತ್ತವೆ.
- ಕೊಂಬಿನ ವೈಶಿಷ್ಟ್ಯ: ಗೇಂಡಾಮೃಗದ ಕೊಂಬು ಮೂಳೆಯಿಂದಾಗಿರದೆ ಕೆರಾಟಿನ್ (Keratin) ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ (ಮಾನವನ ಉಗುರು ಮತ್ತು ಕೂದಲು ರೂಪಿಸುವ ಪ್ರೋಟೀನ್).
- ಕಾನೂನು ಸಂರಕ್ಷಣೆ: ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (Wildlife Protection Act, 1972) ರ ಅಡಿಯಲ್ಲಿ ಇದನ್ನು ಅನುಸೂಚಿ-1 (Schedule I) ರಲ್ಲಿ ಸೇರಿಸಿ ಗರಿಷ್ಠ ರಕ್ಷಣೆ ನೀಡಲಾಗಿದೆ.
- ಇಂಡಿಯನ್ ರೈನೋ ವಿಷನ್ 2020 (IRV 2020): ಅಸ್ಸಾಂ ಸರ್ಕಾರವು WWF ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯೊಂದಿಗೆ ಕೈಗೊಂಡಿದ್ದ ಈ ಯೋಜನೆಯು ಗೇಂಡಾಮೃಗಗಳ ಆವಾಸಸ್ಥಾನ ವಿಸ್ತರಣೆಗೆ ಸಹಾಯ ಮಾಡಿದೆ.