* ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಈ ವರ್ಷದ (2023) ಐಸಿಸಿ ಪುರುಷರ T20 ಕ್ರಿಕೆಟಿಗ ಪ್ರಶಸ್ತಿ ರೆಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. 2022 ರಲ್ಲಿಯೂ 2022ರ ವರ್ಷದ ಐಸಿಸಿ ಕ್ರಿಕೆಟಿಗೆ ಪ್ರಶಸ್ತಿ ಜಯಿಸಿದ್ದರು.
* 33 ವರ್ಷದ ಸೂರ್ಯಕುಮಾರ್ ಯಾದವ್ 2023 ರಲ್ಲಿ 17 ಇನ್ನಿಂಗ್ಸ್‌ಗಳಿಂದ 48.86 ಸರಾಸರಿ ಮತ್ತು 155.95 ಸ್ಟ್ರೈಕ್ ರೇಟ್‌ನಲ್ಲಿ 733 ರನ್‌ಗಳೊಂದಿಗೆ ಕಡಿಮೆ ಸ್ವರೂಪದಲ್ಲಿ ಪ್ರಾಬಲ್ಯ ಸಾಧಿಸಿದರು.
* ಯಾದವ್ ಅವರು ಆಸ್ಟ್ರೇಲಿಯಾ ಎದುರಿನ T20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.
* ಐಸಿಸಿ ಪುರುಷರ T20 ಕ್ರಿಕೆಟಿಗ ಪ್ರಶಸ್ತಿ ರೆಸ್ ನಲ್ಲಿ ಸೂರ್ಯಕುಮಾರ್ ಯಾದವ್ ಅಲ್ಲದೆ ಸಿಕಂದರ್ ರಝಾ (ಜಿಂಬಾಬೈ), ಅಲ್ವೇಶ್ ರಾಮಜಾನಿ (ಉಗಾಂಡ) ಹಾಗೂ ಮಾರ್ಕ್ ಚಾಪ್‌ಮನ್ (ನ್ಯೂಜಿಲೆಂಡ್) ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇತರ ಆಟಗಾರರಾಗಿದ್ದಾರೆ.
* ಭಾರತದ ಬ್ಯಾಟಿಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ 2023 ರ ಐಸಿಸಿ ಪುರುಷರ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರಲ್ಲದೆ, ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಟ್ಜೆ, ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಮತ್ತು ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕಾ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇತರ ಆಟಗಾರರಾಗಿದ್ದಾರೆ.
* ಯಶಸ್ವಿ ಜೈಸ್ವಾಲ್ ಅವರು ಐಪಿಎಲ್ 14 ಪಂದ್ಯಗಳಲ್ಲಿ 625 ರನ್ ಗಳಿಸಿರುವ ಅವರು 48.07 ಸರಾಸರಿ ಮತ್ತು 163.61 ಸ್ಟ್ರೈಕ್ ರೇಟ್ ಕಾಯ್ದುಕೊಂಡು ಐಪಿಎಲ್ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
* ಜೈಸ್ವಾಲ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ ಅಲ್ಲದೆ ಟಿ 20 ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಗಳಿಸಿದ್ದಾರೆ. 2023ರ ಏಶ್ಯನ್ ಗೇಮ್ಸ್ ವಿಜೇತ ಭಾರತ ತಂಡದ ಭಾಗವಾಗಿದ್ದರು.
ಗುರುವಾರ, 04 ಜನವರಿ 2024
10:10 ಪೂರ್ವಾಹ್ನ
Daily PDF
ICC 2023 ಪ್ರಶಸ್ತಿ ರೇಸ್ನಲ್ಲಿ : ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್
Authored by:
Yallamma G