* ಚೀನಾದ ಹಾಂಗ್‌ಝೌ ನಲ್ಲಿ 14 ದಿನಗಳ ಕಾಲ ನಡೆದ 19ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಒಟ್ಟು 107 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಒಳಗೊಂಡಿವೆ. ಒಟ್ಟಾರೆಯಾಗಿ ಈ ಬಾರಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
* ಭಾರತ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪದಕ ಗೆದ್ದು ಹೊಸ ದಾಖಲೆ ಬರೆದಿದೆ. ಈ ಮುಂಚೆ 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ 16 ಚಿನ್ನ 23 ಬೆಳ್ಳಿ ಮತ್ತು 31 ಕಂಚು ಒಟ್ಟಾರೆಯಾಗಿ 70 ಪದಕಗಳನ್ನು ಗೆದ್ದಿರುವುದು ಅತಿ ದೊಡ್ಡ ಸಾಧನೆಯಾಗಿತ್ತು.
* 2023ರ ಏಷ್ಯನ್ ಗೇಮ್ಸ್ ಪದಕ ಪಟ್ಟಿ :
ಮೊದಲ ಸ್ಥಾನದಲ್ಲಿ ಚೀನಾ 
ಎರಡನೇ ಸ್ಥಾನದಲ್ಲಿ ಜಪಾನ್ 
ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ 
ನಾಲ್ಕನೇ ಸ್ಥಾನದಲ್ಲಿ ಭಾರತ 
* 2023ರ ಭಾರತದ ಪದಕ ವಿಜೇತರ ಸಂಪೂರ್ಣ ಪಟ್ಟಿ 
ಬಿಲ್ಲುಗಾರಿಕೆ (Archery)
ಸಂಯುಕ್ತ ಪುರುಷರ ವೈಯಕ್ತಿಕ: ಚಿನ್ನ - ಓಜಸ್ ಡಿಯೋಟಾಲೆ, ಬೆಳ್ಳಿ - ಅಭಿಷೇಕ್ ವರ್ಮಾ
ಸಂಯುಕ್ತ ಮಹಿಳಾ ವೈಯಕ್ತಿಕ: ಚಿನ್ನ - ಜ್ಯೋತಿ ಸುರೇಖಾ ವೆನ್ನಂ, ಕಂಚು - ಅದಿತಿ ಸ್ವಾಮಿ
ಸಂಯುಕ್ತ ಪುರುಷರ ತಂಡ: ಚಿನ್ನ
ಸಂಯುಕ್ತ ಮಹಿಳಾ ತಂಡ: ಚಿನ್ನ
ಸಂಯುಕ್ತ ಮಿಶ್ರ ತಂಡ: ಚಿನ್ನ
ರಿಕರ್ವ್ ಪುರುಷರ ತಂಡ: ಬೆಳ್ಳಿ
ರಿಕರ್ವ್ ಮಹಿಳಾ ತಂಡ: ಕಂಚು

ಅಥ್ಲೆಟಿಕ್ಸ್
ಪುರುಷರ 3000ಮೀ ಸ್ಟೀಪಲ್‌ಚೇಸ್: ಚಿನ್ನ - ಅವಿನಾಶ್ ಸೇಬಲ್
ಪುರುಷರ 4 x 400 ಮೀಟರ್ ರಿಲೇ: ಚಿನ್ನ
ಪುರುಷರ ಜಾವೆಲಿನ್ ಥ್ರೋ: ಚಿನ್ನ- ನೀರಜ್ ಚೋಪ್ರಾ
ಪುರುಷರ ಶಾಟ್‌ಪುಟ್: ಚಿನ್ನ-ತಜಿಂದರ್‌ಪಾಲ್ ಸಿಂಗ್ ತೂರ್
ಮಹಿಳೆಯರ 5000 ಮೀಟರ್‌ ಓಟ: ಚಿನ್ನ- ಪಾರುಲ್ ಚೌಧರಿ
ಮಹಿಳೆಯರ ಜಾವೆಲಿನ್ ಥ್ರೋ: ಚಿನ್ನ-ಅನ್ನು ರಾಣಿ
ಪುರುಷರ 10000 ಮೀಟರ್‌ ಓಟ: ಬೆಳ್ಳಿ- ಕಾರ್ತಿಕ್ ಕುಮಾರ್
ಪುರುಷರ 1500 ಮೀಟರ್‌ ಓಟ: ಬೆಳ್ಳಿ- ಅಜಯ್ ಕುಮಾರ್
ಪುರುಷರ 5000 ಮೀಟರ್‌ ಓಟ: ಬೆಳ್ಳಿ- ಅವಿನಾಶ್ ಸೇಬಲ್
ಪುರುಷರ 800 ಮೀಟರ್‌ ಓಟ: ಬೆಳ್ಳಿ- ಮೊಹಮ್ಮದ್ ಅಫ್ಸಲ್
ಪುರುಷರ ಡೆಕಾಥ್ಲಾನ್: ಬೆಳ್ಳಿ- ತೇಜಸ್ವಿನ್ ಶಂಕರ್
ಪುರುಷರ ಜಾವೆಲಿನ್ ಥ್ರೋ: ಬೆಳ್ಳಿ - ಕಿಶೋರ್ ಜೆನಾ
ಪುರುಷರ ಲಾಂಗ್ ಜಂಪ್: ಬೆಳ್ಳಿ- ಶ್ರೀಶಂಕರ್
ಮಹಿಳೆಯರ 100 ಮೀಟರ್‌ ಹರ್ಡಲ್ಸ್: ಬೆಳ್ಳಿ- ಜ್ಯೋತಿ ಯರ್ರಾಜಿ
ಮಹಿಳೆಯರ 1500 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್
ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಬೆಳ್ಳಿ-ಪಾರುಲ್ ಚೌಧರಿ
ಮಹಿಳೆಯರ 4x400ಮೀ ರಿಲೇ: ಬೆಳ್ಳಿ
ಮಹಿಳೆಯರ 800 ಮೀಟರ್: ಬೆಳ್ಳಿ - ಹರ್ಮಿಲನ್ ಬೇನ್ಸ್
ಮಹಿಳೆಯರ ಲಾಂಗ್ ಜಂಪ್: ಬೆಳ್ಳಿ - ಆನ್ಸಿ ಸೋಜನ್
4x400ಮೀ ಮಿಶ್ರ ರಿಲೇ: ಬೆಳ್ಳಿ
ಪುರುಷರ 10000 ಮೀಟರ್: ಕಂಚು - ಗುಲ್ವೀರ್ ಸಿಂಗ್
ಪುರುಷರ 1500 ಮೀಟರ್: ಕಂಚು - ಜಿನ್ಸನ್ ಜಾನ್ಸನ್
ಪುರುಷರ ಟ್ರಿಪಲ್ ಜಂಪ್: ಕಂಚು - ಪ್ರವೀಣ್ ಚಿತ್ರವೇಲ್
ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್: ಕಂಚು-ಪ್ರೀತಿ ಲಂಬಾ
ಮಹಿಳೆಯರ 400 ಮೀಟರ್ ಹರ್ಡಲ್ಸ್: ಕಂಚು - ವಿತ್ಯಾ ರಾಮರಾಜ್
ಮಹಿಳೆಯರ ಡಿಸ್ಕಸ್ ಥ್ರೋ: ಕಂಚು - ಸೀಮಾ ಪುನಿಯಾ
ಮಹಿಳೆಯರ ಹೆಪ್ಟಾಥ್ಲಾನ್: ಕಂಚು- ನಂದಿನಿ ಅಗಸರ
ಮಹಿಳೆಯರ ಶಾಟ್ ಪುಟ್: ಕಂಚು- ಕಿರಣ್ ಬಲಿಯಾನ್
35 ಕಿಮೀ ಓಟದ ನಡಿಗೆ ಮಿಶ್ರ ತಂಡ: ಕಂಚು

ಬ್ಯಾಡ್ಮಿಂಟನ್
ಪುರುಷರ ಡಬಲ್ಸ್: ಚಿನ್ನ- ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
ಪುರುಷರ ತಂಡ: ಬೆಳ್ಳಿ
ಪುರುಷರ ಸಿಂಗಲ್ಸ್: ಕಂಚು - ಪ್ರಣಯ್

ಬಾಕ್ಸಿಂಗ್ (Boxing)
ಮಹಿಳೆಯರ 75 ಕೆಜಿ: ಕಂಚು - ಲೊವ್ಲಿನಾ
ಪುರುಷರ +92 ಕೆಜಿ: ಕಂಚು - ನರೇಂದರ್
ಮಹಿಳೆಯರ 45-50 ಕೆಜಿ: ಕಂಚು - ನಿಖತ್ ಜರೀನ್
ಮಹಿಳೆಯರ 50-54 ಕೆಜಿ: ಕಂಚು- ಪ್ರೀತಿ
ಮಹಿಳೆಯರ 54-57 ಕೆಜಿ: ಕಂಚು-ಪರ್ವೀನ್

ಬ್ರಿಡ್ಜ್‌ (Bridge)
ಪುರುಷರ ತಂಡ: ಬೆಳ್ಳಿ
ಪುರುಷರ ಕ್ಯಾನೋ ಡಬಲ್ 1000 ಮೀಟರ್: ಕಂಚು

ಚೆಸ್
ಪುರುಷರ ತಂಡ: ಬೆಳ್ಳಿ
ಮಹಿಳಾ ತಂಡ: ಬೆಳ್ಳಿ

ಕ್ರಿಕೆಟ್
ಪುರುಷರ ತಂಡ: ಚಿನ್ನ
ಮಹಿಳಾ ತಂಡ: ಚಿನ್ನ

ಕುದುರೆ ಸವಾರಿ (Equestrian)
ಡ್ರೆಸ್ಸೇಜ್ ತಂಡ: ಚಿನ್ನ
ಡ್ರೆಸ್ಸೇಜ್: ಕಂಚು - ಅನುಷ್ ಅಗರ್ವಾಲಾ

ಗಾಲ್ಫ್ (Golf)
ಮಹಿಳೆಯರ ವೈಯಕ್ತಿಕ: ಬೆಳ್ಳಿ- ಅದಿತಿ ಅಶೋಕ್

ಹಾಕಿ
ಪುರುಷರ ತಂಡ: ಚಿನ್ನ
ಮಹಿಳಾ ತಂಡ: ಕಂಚು
ಮುಂದುವರಿಯುವುದು...