Job Description: ➤ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದತ್ತಾಂಶ ಆಧರಿಸಿ ‘ಬಿಸಿನೆಸ್ ಸ್ಟ್ಯಾಂಡರ್ಡ್’ ತಯಾರಿಸಿರುವ ‘ಇಂಡಿಯಾ ಸ್ಟೇಟ್ ಫಿಸ್ಕಲ್ ಹೆಲ್ತ್ ಟ್ರ್ಯಾಕರ್’ (India State Fiscal Health Tracker) ವರದಿಯ ಪ್ರಕಾರ, 2024-25ರ ಆಯವ್ಯಯ ಅಂದಾಜಿನಲ್ಲಿ (FY25 Budget Estimates) ಸ್ವಂತ ಆದಾಯದ ಪಾಲಿನಲ್ಲಿ (Own Revenue Share) ದೆಹಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.- ಆರ್‌ಬಿಐ ಆಧಾರಿತ ದತ್ತಾಂಶ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿದ ‘ಸ್ಟೇಟ್ಸ್ ಬ್ಯಾಂಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ಆನ್ ಇಂಡಿಯನ್ ಸ್ಟೇಟ್ಸ್’ ಆಧಾರದ ಮೇಲೆ ಈ ಶ್ರೇಯಾಂಕ ಸಿದ್ಧಪಡಿಸಲಾಗಿದೆ.- ದೆಹಲಿಗೆ ಅಗ್ರಸ್ಥಾನ: ದೆಹಲಿಯು ತನ್ನ ಒಟ್ಟು ಕಂದಾಯ ಸ್ವೀಕೃತಿಗಳಲ್ಲಿ 93.2% ಸ್ವಂತ ಆದಾಯ ಹೊಂದುವ ಮೂಲಕ ಅತ್ಯಂತ ಕನಿಷ್ಠ ಕೇಂದ್ರ ಅವಲಂಬನೆ ಹೊಂದಿದೆ.- ಕರ್ನಾಟಕಕ್ಕೆ 4ನೇ ಸ್ಥಾನ: ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕವು 77.3% ಪಾಲಿನೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.- ಕೊನೆಯ ಸ್ಥಾನದಲ್ಲಿದ್ದ ರಾಜ್ಯ: ಈ ಪಟ್ಟಿಯಲ್ಲಿ ಮಣಿಪುರ (10.0%) ಅತ್ಯಂತ ಕೆಳಮಟ್ಟದಲ್ಲಿದೆ.➤ ಸ್ವಂತ ಆದಾಯ (Own Revenue): ಒಂದು ರಾಜ್ಯ ಸರ್ಕಾರವು ತನಗೆ ಬರುವ ಒಟ್ಟು ಆದಾಯದಲ್ಲಿ (Total Revenue Receipts) ಎಷ್ಟು ಭಾಗವನ್ನು ತನ್ನದೇ ಮೂಲಗಳಿಂದ ಸಂಗ್ರಹಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.- ಸ್ವಂತ ತೆರಿಗೆ ಆದಾಯ (Own Tax Revenue): ರಾಜ್ಯವೇ ವಿಧಿಸಿ ವಸೂಲಿ ಮಾಡುವ ತೆರಿಗೆಗಳು (ಉದಾ: ಜಿಎಸ್‌ಟಿ ಭಾಗ, ಮೌಲ್ಯವರ್ಧಿತ ತೆರಿಗೆ/VAT, ಅಬಕಾರಿ ಸುಂಕ, ಮುದ್ರಾ೦ಕ ಮತ್ತು ನೋಂದಣಿ ಶುಲ್ಕ, ವಾಹನ ತೆರಿಗೆ).- ಸ್ವಂತ ತೆರಿಗೆಯೇತರ ಆದಾಯ (Own Non-Tax Revenue): ಸೇವಾ ಶುಲ್ಕಗಳು, ರಾಯಲ್ಟಿ, ಲಾಭಾಂಶಗಳು, ದಂಡ ಇತ್ಯಾದಿ.➤ ಟಾಪ್-5 ಅತ್ಯಧಿಕ ಸ್ವಂತ ಆದಾಯ ಹೊಂದಿರುವ ರಾಜ್ಯಗಳು:1. ದೆಹಲಿ (Delhi): 93.2%2. ಹರಿಯಾಣ (Haryana): 80.4%3. ತೆಲಂಗಾಣ (Telangana): 78.4%4. ಕರ್ನಾಟಕ (Karnataka): 77.3%5. ತಮಿಳುನಾಡು (Tamil Nadu): 75.5%