ಜುಲೈ 20: ಬಾಹ್ಯಾಕಾಶ ಪರಿಶೋಧನಾ ದಿನ (Space Exploration Day)
Published by Basavaraj Halli
21 ಜುಲೈ 2020
ಪ್ರತಿ ವರ್ಷ ಜುಲೈ 20 ರಂದು, ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟ ದಿನದ ಐತಿಹಾಸಿಕ ಗಳಿಗೆಯ ವಾರ್ಷಿಕೋತ್ಸವದ ಸವಿನೆನಪಿಗೆ ಬಾಹ್ಯಾಕಾಶ ಪರಿಶೋಧನಾ ದಿನವನ್ನು ಆಚರಿಸಲಾಗುತ್ತದೆ.
* ಜುಲೈ 20, 1969 ರಂದು, ಅಮೆರಿಕಾದ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಎಡ್ವಿನ್ ಬಜ್ ಚಂದ್ರನ ಮೇಲ್ಮೈಗೆ ಇಳಿದ ಮೊದಲ ಮಾನವರಾದರು. ಆರ್ಮ್ಸ್ಟ್ರಾಂಗ್- ಎಡ್ವಿನ್ ಜೋಡಿ ಚಂದ್ರನ ಮೇಲ್ಮೈಯಲ್ಲಿ 21.5 ಗಂಟೆಗಳ ಕಾಲ ಕಳೆದರು. ಅಲ್ಲದೆ, ಅವರು ತಮ್ಮ ಕ್ಯಾಪ್ಸುಲ್ಗಳ ಹೊರಗೆ 2.5 ಗಂಟೆಗಳ ಕಾಲ ಕಳೆದರು. ಈ ದಿನವನ್ನು ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಆಚರಿಸಲಾಗುತ್ತದೆ.