ಅಂತರ್ಜಾಲ ಬಳಕೆಯಲ್ಲಿ ವಿಶ್ವದಲ್ಲೇ ಭಾರತ ಮುಂದು
Published by Basavaraj Halli
22 ಜುಲೈ 2020
ಅಂತರ್ಜಾಲ ಈಗ ಜಗತ್ತಿನ ಅವಿಭಾಜ್ಯ ಅಂಗ. ಜಾಗತಿಕ ಅನುಪಾತಕ್ಕೆ ಹೋಲಿಸಿದರೆ 2019ರ ಅಂತ್ಯದ ವೇಳೆಗೆ ಭಾರತೀಯ ಬಳಕೆದಾರರ ಸಂಖ್ಯೆ ಜಾಸ್ತಿಯಾಗಿದೆ. ಇದೆ ಕಾರಣದಿಂದಾಗಿ ಅಂತರ್ಜಾಲ ಬಳಸುತ್ತಿರುವ ಭಾರತೀಯರ ಪ್ರಮಾಣ ಈಗ ಶೇ.54.3 ಕ್ಕೇರಿದೆ.
* ಜಾಗತಿಕವಾಗಿ 401 ಕೋಟಿ ಜನ 2019ರ ಅಂತ್ಯದ ಹೊತ್ತಿಗೆ ಅಂತರ್ಜಾಲ ಬಳಸಿದ್ದಾರೆಂದು ಅಂತಾ ರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ತಿಳಿಸಿದೆ.
* ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತವೇ ಅತಿ ಹೆಚ್ಚು ಅಂತಜಾಲ ಬಳಕೆದಾರರ ಪ್ರಮಾಣ ಹೊಂದಿದೆ. 2019ರ ಅಂತ್ಯದ ಹೊತ್ತಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಪ್ರತೀ 100 ಜನಸಂಖ್ಯೆಗೆ 47 ಮಂದಿ ಅಂತರ್ಜಾಲ ಬಳಕೆ ಮಾಡುತ್ತಿದ್ದರೆ, ಭಾರತದ ಮಟ್ಟಿಗೆ ಬಂದರೆ 2019ರ ಜೂನ್ನಲ್ಲೇ, ಪ್ರತೀ 100 ಜನಸಂಖ್ಯೆಯಲ್ಲಿ 50.5ರಷ್ಟು ಮಂದಿ ಅಂತರ್ಜಾಲ ಬಳಕೆ ಮಾಡುತ್ತಿರುವದಾಗಿ ವರದಿಯಾಗಿದೆ.