ಭಾರತ-ಭೂತಾನ್ ನಡುವೆ ಹೊಸ ವ್ಯಾಪಾರ ಒಪ್ಪಂದ
Published by Basavaraj Halli
18 ಜುಲೈ 2020
ದಿನಾಂಕ ಜುಲೈ 16, 2020 ರಂದು ಭಾರತ ಮತ್ತು ಭೂತಾನ್ ನಡುವೆ ನೂತನ ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದ ಪ್ರಕಾರ ಭಾರತದ ಪಶ್ಚಿಮ ಬಂಗಾಲದ ಜೈಗಾನ್ ಮತ್ತು ಭೂತಾನ್ನ ಪಸಖಾ ನಡುವೆ ಹೊಸ ರಸ್ತೆ ಮಾರ್ಗ ಆರಂಭಿಸಲಾಗುವದು.
* ಈ ನೂತನ ಮಾರ್ಗದಿಂದ ಪಸಖಾ ಕೈಗಾರಿಕಾ ಪ್ರದೇಶದಿಂದ ಕಚ್ಚಾ ವಸ್ತುಗಳು ಮತ್ತು ಸರಕುಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಹಾಗೂ ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
* ಅರುಣಾಚಲ ಪ್ರದೇಶದ ತವಾಂಗ್ ಅನ್ನು ತ್ವರಿತವಾಗಿ ಪ್ರವೇಶಿಸಲು ಈ ರಸ್ತೆ ಸಹಾಯ ಮಾಡುವುದಲ್ಲದೆ. ಈ ರಸ್ತೆಯು ಗುವಾಹಟಿ ಮತ್ತು ತವಾಂಗ್ ನಡುವಿನ ಅಂತರವನ್ನು 150 ಕಿಲೋಮೀಟರ್ ಕಡಿಮೆ ಮಾಡುತ್ತದೆ.