ದೆಹಲಿ ಸರ್ಕಾರದಿಂದ ಒಂದು ವರ್ಷದವರೆಗೆ ಪಾನ್ ಮಸಾಲ, ಗುಟ್ಕಾ ಸೇವನೆಗೆ ನಿಷೇಧ
Published by Basavaraj Halli
18 ಜುಲೈ 2020
ನವದೆಹಲಿ : ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಂದು ವರ್ಷದ ಅವಧಿಯವರೆಗೆ ಪಾನ್ ಮಸಾಲ, ಗುಟ್ಕಾ ಸೇವೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
* ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ಸದುದ್ದೇಶದಿಂದ 2006 ರ ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷನ್ 30 ರ ಅನ್ವಯ ಒಂದು ವರ್ಷದ ಅವಧಿಯವರೆಗೆ ಪಾನ್ ಮಸಾಲ, ಗುಟ್ಕಾ ಸೇವನೆ ನಿಷೇಧ ಹೇರಲಾಗಿದೆ.