ಭಾರತದ ಡಿಜಿಟಲ್ ಆರ್ಥಿಕತೆ ಉತ್ತೇಜನಕ್ಕೆ 75,000 ಕೋಟಿ ರೂ. ನಿಧಿ ಘೋಷಿಸಿದ 'ಗೂಗಲ್'
Published by Basavaraj Halli
13 ಜುಲೈ 2020
ನವದೆಹಲಿ : ಭಾರತದ ಡಿಜಿಟಲ್ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಗೂಗಲ್ ಸಂಸ್ಥೆಯು 75,000 ಕೋಟಿ ರೂ. ನಿಧಿಯನ್ನು ಘೋಷಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಲು ಗೂಗಲ್ ಹೆಮ್ಮೆ ಪಡುತ್ತದೆ ಎಂದಿದ್ದಾರೆ.
ಡಿಜಿಟಲ್ ಇಂಡಿಯಾ ಅಭಿವೃದ್ಧಿಗಾಗಿ ಮುಂದಿನ 5-7 ವರ್ಷಗಳ ಕಾಲ ಭಾರತದಲ್ಲಿ 75 ಸಾವಿರ ಕೋಟಿ ರುಪಾಯಿಯನ್ನು ಗೂಗಲ್ ಹೂಡಿಕೆ ಮಾಡಲಿದೆ ಎಂದು ಅವರು ತಿಳಿಸಿದರು.