ಕೇಂದ್ರದಿಂದ ರಾಜ್ಯದ ಪಾಲಿನ 4,314 ಕೋಟಿ `GST' ಹಣ ಬಿಡುಗಡೆ
Published by Siddaram Halli
06 ಜೂನ್ 2020
ಬೆಂಗಳೂರು : ಕೇಂದ್ರ ಸರ್ಕಾರವು ಕರ್ನಾಟಕದ ಪಾಲಿನ ಸರಕು ಮತ್ತು ಸೇವಾ ತೆರಿಗೆ ಹಣವನ್ನು ಬಿಡುಗಡೆ ಮಾಡಿದ್ದು, ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೂರು ತಿಂಗಳ ಬಾಕಿ ಮೊತ್ತ ರೂಪಾಯಿ 4,314 ಕೋಟಿ ಅನುದಾನ ಬಿಡುಗಡೆ ಮಾಡಿದೆ.
* 2019 ರ ಡಿಸೆಂಬರ್ ನಿಂದ 2020 ರ ಫೆಬ್ರವರಿ ತಿಂಗಳವರೆಗಿನ ಆದಾಯ ನಷ್ಟದ ಪರಿಹಾರದ ಮೊತ್ತ ಇದಾಗಿದೆ.
* 3 ತಿಂಗಳ ಅವಧಿಯಲ್ಲಿ ರಾಜ್ಯ ಎದುರಿಸಿದ ಆದಾಯ ನಷ್ಟದ ಪರಿಹಾರ ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.