ಹೊಸದಿಲ್ಲಿ: 2022ರ ಎಎಫ್‌ಸಿ ಮಹಿಳಾ ಏಶ್ಯನ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿಗಳನ್ನ ಭಾರತದಲ್ಲಿ ಆಯೋಜಿಸಲು ಏಶ್ಯನ್‌ ಫುಟ್ಬಾಲ್‌ ಕಾನ್ಫೆಡರೇಶನ್‌ (ಎಎಫ್‌ಸಿ) ನಿರ್ಧರಿಸಿದೆ. * ಈ ಕ್ರೀಡಾಕೂಟವನ್ನು 1979ರಲ್ಲಿ ಮೊದಲ ಬಾರಿ ಭಾರತದಲ್ಲಿ ಆಯೋಜಿಸಲಾಗಿತ್ತು ಆಗ ಭಾರತ ತಂಡ ರನ್ನರ್ ಅಪ್‌ ಪ್ರಶಸ್ತಿ ಪಡೆದಿತ್ತು. * ಭಾರತ ಈ ಮೊದಲು 2016ರಲ್ಲಿ AFC ಅಂಡರ್‌-16 ಚಾಂಪಿಯನ್‌ಶಿಪ್‌ ಹಾಗೂ 2017ರಲ್ಲಿ ಫಿಫಾ ಅಂಡರ್‌-17 ವಿಶ್ವಕಪ್‌ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು.