ವಾಷಿಂಗ್ಟನ್‌ : 'ಸ್ಪೇಸ್‌ ಎಕ್ಸ್‌' ಕಂಪನಿ ನಾಸಾದ ಇಬ್ಬರು ಗಗನಯಾತ್ರಿಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಸ್ಥೆಯು ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ 'ಫಾಲ್ಕನ್‌-9' ರಾಕೆಟ್‌ ಉಡಾವಣೆಗೊಳಿಸುವ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಿದೆ. ಈ ಮೂಲಕ ಈ ಸಾಧನೆಗೈದ ಮೊದಲ ಖಾಸಗಿ ಕಂಪನಿ ಎನ್ನುವ ಹೆಗ್ಗಳಿಕೆಗೆ 'ಸ್ಪೆಸ್‌ ಎಕ್ಸ್‌' ಪಡೆಯಿತು. ಗಗನಯಾತ್ರಿಗಳಾದ ರಾಬರ್ಟ್‌ ಬಾಬ್‌ ಬೆಹ್ನಕೆನ್‌ (49) ಮತ್ತು ಡೌ‌ಗ್ಲಾಸ್‌ ಹರ್ಲಿ (53) ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ವಿಜ್ಞಾನಿಗಳಾಗಿದ್ದಾರೆ.