ಜಿ7 ವಿಸ್ತರಿಸಲು ಟ್ರಂಪ್ ಯೋಜನೆ ಭಾರತಕ್ಕೂ ಆಹ್ವಾನ
Published by Basavaraj Halli
01 ಜೂನ್ 2020
ವಾಷಿಂಗ್ಟನ್: ಜಗತ್ತಿನ ಏಳು ಪ್ರಮುಖ ಅರ್ಥವ್ಯವಸ್ಥೆ ಹೊಂದಿದ ಜಿ7 ಗ್ರೂಪ್ ಈಗ ಹಳೆಯದಾಗಿದ್ದು, ಈ ಗ್ರೂಪ್ ಗೆ ಹೊಸತನವನ್ನು ನೀಡಲು ಭಾರತ ಸೇರಿ ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ರಾಷ್ಟ್ರಗಳನ್ನು ಸೇರಿಸೋಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೆ ಜೂನ್ ನಲ್ಲಿ ವೈಟ್ಹೌಸ್ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಜಿ7 ರಾಷ್ಟ್ರಗಳ ಶೃಂಗವನ್ನು
ಸೆಪ್ಟೆಂಬರ್ ತನಕ ಮುಂದೂಡಲಾಗಿದೆ.