ಅಗ್ಗದ ದರದ ವೆಂಟಿಲೇಟರ್ ಗಳ ಅಭಿವೃದ್ಧಿಗೆ 3 ಭಾರತೀಯ ಕಂಪನಿಗಳ ಆಯ್ಕೆ ಮಾಡಿದ ನಾಸಾ
Published by Basavaraj Halli
31 ಮೇ 2020
ವಾಷಿಂಗ್ ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು ಕಡಿಮೆ ಬೆಲೆಯ ವೆಂಟಿಲೇಟರಗಳ ಅಭಿವೃದಿ ಪಡಿಸಲು ಒಟ್ಟು 3 ಭಾರತೀಯ ಕಂಪನಿಗಳನ್ನ ಆಯ್ಕೆ ಮಾಡಿದೆ. ಈ ಕಂಪನಿಗಳು ಕೋವಿಡ್-19 ಸೋಂಕಿತರಿಗಾಗಿ ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿ ಮಾಡಿಕೊಡಲಿವೆ. ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್, ಭಾರತ್ ಫೋರ್ಜ್ ಲಿಮಿಟೆಡ್, ಮೇಧಾ ಸರ್ವೋ ಡ್ರೈವ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳನ್ನು ಅಗ್ಗದ ದರದಲ್ಲಿ ವೆಂಟಿಲೇಟರ್ ಅಭಿವೃದ್ಧಿ ಪಡಿಸಲು ನಾಸಾ ಆಯ್ಕೆ ಮಾಡಿದ ಭಾರತೀಯ ಕಂಪನಿಗಳಾಗಿವೆ.
ಈ ಕಂಪನಿಗಳು ತಯಾರಿಸಲಿರುವ ಅಗ್ಗದ ವೆಂಟಿಲೇಟರ್ ಗಳ ಮೂಲಮಾದರಿಯನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ತಂತ್ರಜ್ಞರು 37 ದಿನಗಳ ಅವಧಿಯಲ್ಲಿ ಸಿದ್ದಪಡಿಸಿದ್ದಾರೆ.