BCCI ನಿಂದ 'ಖೇಲ್ ರತ್ನ' ಕ್ಕೆ ರೋಹಿತ್ ಶರ್ಮಾ ಮತ್ತು 'ಅರ್ಜುನ'ಕ್ಕೆ ಧವನ್ ಹೆಸರು ನಾಮನಿರ್ದೇಶನ
Published by Basavaraj Halli
31 ಮೇ 2020
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (BCCI) ಭಾರತ ಕ್ರಿಕೆಟ್ ತಂಡದ ಹಿಟ್‌ಮ್ಯಾನ್ ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ 2020 ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಜೊತೆಗೆ ಶಿಖರ್ ಧವನ್, ಇಶಾಂತ್ ಶರ್ಮಾ ಮತ್ತು ದೀಪ್ತೀ ಶರ್ಮಾ ಹೆಸರುಗಳು ಅರ್ಜುನಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.
ಜನವರಿ 1ರಿಂದ ಡಿಸೆಂಬರ್ 2019ರ ವರೆಗಿನ ಕಾಲಾವಧಿಯ ಸಾಧನೆ ಪರಿಗಣಿ ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ 2020ರ ವರ್ಷಕ್ಕೆ ಬೇರೆ ಬೇರೆ ಪ್ರಶಸ್ತಿಗಳಿಗೆ ಹೆಸರುಗಳನ್ನು ಆಹ್ವಾನಿಸಿತ್ತು. ಅದರಂತೆ ಬಿಸಿಸಿಐ ಈ ಕ್ರಿಕೆಟಿಗರ ಹೆಸರುಗಳನ್ನು ನಾಮನಿರ್ದೇಶನಗೊಳಿಸಿದೆ.