ಅಂಫಾನ್ ಚಂಡಮಾರುತ : ಒಡಿಶಾ ರಾಜ್ಯಕ್ಕೆ 500 ಕೋಟಿ ರುಪಾಯಿ ನೆರವು
Published by Basavaraj Halli
23 ಮೇ 2020
ಭುವನೇಶ್ವರ : ಅಂಫಾನ್ ಚಂಡಮಾರುತ ದಾಳಿಯಿಂದಾಗಿ ಭಾರತದ ಪೂರ್ವ ಕರಾವಳಿಯ ರಾಜ್ಯಗಳಿಗೆ ಸಂಕಷ್ಟ ಅನುಭವಿಸುತ್ತಿದ್ದು ಅದರಲ್ಲೂ ಪಶ್ಚಿಮ ಬಂಗಾಲ ಮತ್ತು ಒಡಿಶಾ ರಾಜ್ಯಗಳು ತೀವ್ರ ಹಾನಿಗೊಳಗಾಗಿವೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲದೆ ಪೀಡಿತ ಒಡಿಶಾಗೆ 500 ಕೋಟಿ ರುಪಾಯಿಯ ಮುಂಗಡ ಹಣಕಾಸು ನೆರವು ಘೋಷಿಸಿದ್ದಾರೆ.
* ಮೋದಿ ಅವರು ಭದ್ರಾಕ್, ಬಾಲಸೋರ್, ಜಾಜ್‌ಪುರ ಮತ್ತು ಮಯೂರ್ಭಂಜ್ ಮುಂತಾದ ಜಿಲ್ಲೆಗಳಲ್ಲಿ ಸುಮಾರು 90 ನಿಮಿಷಗಳ ಕಾಲ ವೈಮಾನಿನ ಸಮೀಕ್ಷೆ ಮಾಡಿದರು.