ಆತ್ಮ ನಿರ್ಭರ ಭಾರತ ಯೋಜನಾ : ಮೋದಿ ಪ್ಯಾಕೇಜ್ಗೆ ಸಚಿವ ಸಂಪುಟ ಒಪ್ಪಿಗೆ
Published by Basavaraj Halli
22 ಮೇ 2020
ನವದೆಹಲಿ: ದೇಶದ ಆರ್ಥಿಕ ಸ್ಥಿತಿ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಹಲವು ಮಹತ್ವದ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಮೇ 20 ರಂದು ಅನುಮೋದನೆ ನೀಡಲಾಯಿತು.
ದೇಶದ ಆರ್ಥಿಕತೆ ಸುಧಾರಿಸುವ ಸಲುವಾಗಿ ವಿವಿಧ ಕ್ಷೇತ್ರಗಳ ಗಮನದಲ್ಲಿರಿಸಿಕೊಂಡು ದಿನಾಂಕ ಮೇ 13 ರಿಂದ ಒಟ್ಟು ಐದು ಹಂತಗಳಲ್ಲಿ ಹಲವು ಮಹತ್ವದ ಘೋಷಣೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.