ಅಯೋಧ್ಯಾ ರಾಮಮಂದಿರ ನಿರ್ಮಾಣದ ವೇಳೆ ಪುರಾತನ ವಿಗ್ರಹಗಳು ಪತ್ತೆ
Published by Basavaraj Halli
22 ಮೇ 2020
ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದನ್ವಯ ಕೇಂದ್ರ ಸರಕಾರ ನೇಮಿಸಿದ ಸಮಿತಿ ನಿರ್ಣಯದಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ಲಾಕ್‌ಡೌನ್ ನಡುವೆ 67 ಎಕರೆ ವಿಸ್ತೀರ್ಣದ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಉತ್ಖನನ ಸೇರಿ ವಿವಿಧ ಕಾರ್ಯಗಳು ಆರಂಭವಾಗಿವೆ.
ಈ ಭೂಮಿ ಅಗೆಯುವ ಹಾಗೂ ಸಮತಟ್ಟು ಮಾಡುವ ಪ್ರಕ್ರಿಯೆ ವೇಳೆ ಅನೇಕ ಪುರಾತನ ಮೂರ್ತಿ ಹಾಗೂ ಮಂದಿರದ ಅವಶೇಷಗಳು ಲಭ್ಯವಾಗಿವೆ. ಇವುಗಳಲ್ಲಿ ದೇವಿ ದೇವತೆಯ ತುಂಡಾದ ಮೂರ್ತಿಗಳ ಪೈಕಿ ಬ್ಲ್ಯಾಕ್ ಟಚ್ ಸ್ಟೋನ್‌ನ ಸ್ಥಂಭ, ಆರು ರೆಡ್ ಸ್ಯಾಂಡ್ ಸ್ಟೋನ್ ಸ್ಥಂಭ, ಹಾಗೂ ಐದು ಅಡಿ ಎತ್ತರದ ಶಿವಲಿಂಗ ಸೇರಿ ಅನೇಕ ಪುರಾತನ ಅವಶೇಷಗಳು ದೊರೆತಿವೆ.