ಕೇಂದ್ರ ಸರ್ಕಾರಿ ನೌಕರರಿಗೆ 15 ದಿನ ವರ್ಕ್ ಫ್ರಂ ಹೋಮ್ ಅವಕಾಶ : ಹೊಸ ಕರಡು ಸಿದ್ಧತೆ
Published by Basavaraj Halli
15 ಮೇ 2020
ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕೋರೋಣ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಇನ್ಮುಂದೆ ವರ್ಷದಲ್ಲಿ 15 ದಿನ ಮನೆಯಿಂದಲೇ ಕಚೇರಿ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಸೌಲಭ್ಯದ ಕುರಿತು ಕೇಂದ್ರ ಸರ್ಕಾರ ಕರಡು ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ ಈ ಕುರಿತು ಕರಡು ಪ್ರಸ್ತಾಪವನ್ನಿಟ್ಟಿತ್ತು. ಈ ನೂತನ ಕ್ರಮದಿಂದ ದೇಶದಲ್ಲಿ ಇರುವ ಸುಮಾರು 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ 15 ದಿನ ವರ್ಕ್ ಫ್ರಂ ಹೋಮ್ ಸೌಲಭ್ಯ ದೊರೆಯಲಿದೆ.