ಪದ್ಮಭೂಷಣ ಪುರಸ್ಕೃತ ಪ್ರೊ. ಅನೀಸುಝ್ಝಮಾನ್ ನಿಧನ
Published by Basavaraj Halli
15 ಮೇ 2020
ಡಾಕಾ : ತಮ್ಮ ಅಧ್ಯಯನ ಹಾಗೂ ಬರಹಗಳ ಮೂಲಕ ಬಾಂಗ್ಲಾ ಭಾಷೆಯ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ಸಲ್ಲಿಸಿರುವ ಅನೀಸುಝ್ಝಮಾನ್ ಅವರು ಮೂತ್ರಪಿಂಡ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ತಮ್ಮ 83 ವಯಸ್ಸಿನಲ್ಲಿ ವಿಧಿವಶರಾದರು.
ಇವರು ಬಾಂಗ್ಲಾ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿದ ಭಾರತ ಸರಕಾವು ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.