EPF ಇನ್ನೂ 3 ತಿಂಗಳು ಕೇಂದ್ರವೇ ಪಾವತಿಸುತ್ತದೆ: ನಿರ್ಮಲಾ ಸೀತಾರಾಮನ್
Published by Basavaraj Halli
14 ಮೇ 2020
ನವದೆಹಲಿ: ಕೊವಿಡ್-19 ರಿಂದ ತೀವ್ರ ಹೊಡೆತಕ್ಕೆ ಒಳಗಾದ ಉದ್ಯಮಗಳನ್ನು ಸಹಜ ಸ್ಥಿತಿಗೆ ಬರಲು ಕೆಲ ಸಮಯ ಬೇಕಾಗುತ್ತದೆ. ಹಾಗಾಗಿ ಅಂಥ ಇಪಿಎಫ್ ಸಂಸ್ಥೆಗಳಿಗೆ ಇನ್ನೂ ಮೂರು ತಿಂಗಳು ಕೇಂದ್ರ ಸರ್ಕಾರದಿಂದ ನೆರವು ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಉದ್ಯಮ ಮತ್ತು ಉದ್ಯೋಗಿಗಳಿಗೆ EPF ಹಣದ ಸಹಕಾರವನ್ನು ಇನ್ನೂ ಮೂರು ತಿಂಗಳು ಅಂದರೆ ಜೂನ್, ಜುಲೈ, ಆಗಸ್ಟ್ಗೆ ವಿಸ್ತರಿಸಿಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ನಲ್ಲಿ 2500 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಿಂದಾಗಿ 3.67 ಲಕ್ಷ ಸಂಸ್ಥೆಗಳ 72.22 ಲಕ್ಷ ನೌಕರರು ಅನುಕೂಲ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.