ನಿತ್ಯ 6 ಸಾವಿರ ಮಕ್ಕಳ ಸಾವು : ಯುನಿಸೆಫ್ ಎಚ್ಚರಿಕೆ
Published by Basavaraj Halli
14 ಮೇ 2020
ವಿಶ್ವಸಂಸ್ಥೆ : ಇಡೀ ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್ ವೈರಸ್‌ನ ಪರಿಣಾಮವಾಗಿ ಬರುವ ಮುಂದಿನ ಆರು ತಿಂಗಳಲ್ಲಿ ನಿತ್ಯ 6,000 ಮಕ್ಕಳು ಸಾವಿಗೀಡಾಗಬಹುದು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಎಚ್ಚರಿಸಿದೆ.
ಕೋರೋಣ ಸೋಂಕಿನಿಂದ ಜನರ ದೈನಂದಿನ ಆರೋಗ್ಯ ಸೇವೆಯ ಮೇಲೆ ಉಂಟಾಗುವ ದುಷ್ಪರಿಣಾಮಗಳಿಂದಾಗಿ ಈ ಸಾವುಗಳು ಸಂಭವಿಸಲಿವೆ ಹಾಗು ಎರಡನೇ ಜಾಗತಿಕ ಯುದ್ಧದ ಬಳಿಕದ ಅತಿ ದೊಡ್ಡ ದುರಂತ ಇದಾಗಲಿದೆ ಎಂದು ಯುನಿಸೆಫ್ ಹೇಳಿದೆ.
* ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಔಷಧಗಳು, ಹಾಗು ಲಸಿಕೆಗಳ ಅಭಾವ, ಸಮರ್ಪಕ ಆರೈಕೆ ಮತ್ತು ಶುಶ್ರೂಷೆಯ ಕೊರತೆಯಿಂದ ಮುಂದಿನ ಆರು ತಿಂಗಳಲ್ಲಿ ಸುಮಾರು 12 ಲಕ್ಷ ಮಕ್ಕಳು ಸಾವಿಗೀಡಾಗಬಹುದು ಎಂಬುದಾಗಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಹಾಪ್‌ಕಿನ್ಸ್ ಬ್ಲೂಮ್‌ರಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.