ಪ್ರಧಾನಿ ಸಂಶೋಧನಾ ಫೆಲೋಶಿಪ್ ಯೋಜನೆಗೆ (PMRAF) ತಿದ್ದುಪಡಿ
Published by Basavaraj Halli
11 ಮೇ 2020
ಭಾರತ ಸರ್ಕಾರದ ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಇತ್ತೀಚೆಗೆ ಪ್ರಧಾನಿ ಸಂಶೋಧನಾ ಫೆಲೋಶಿಪ್ ಯೋಜನೆಗೆ ವಿವಿಧ ತಿದ್ದುಪಡಿಗಳನ್ನು ಮಾಡಿ ಘೋಷಿಸಿದೆ.
ಕೇಂದ್ರ ಸರ್ಕಾರದ ಈ ಯೋಜನೆಯು, ಸಂಶೋಧನೆಗಳನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಅಲ್ಲದೆ, “ಸಂಶೋಧನೆ ಮತ್ತು ಇನ್ನೋವೇಶನ್ ವಿಭಾಗ” ಎಂಬ ಪ್ರತ್ಯೇಕವಾದ ವಿಭಾಗವನ್ನು ಆರಂಭಿಸಿದೆ.
ನೂತನ ತಿದ್ದುಪಡಿಯ ಅನ್ವಯ 2020-21 ನೇ ಸಾಲಿನಲ್ಲಿ ಕೇಂದ್ರ ಸಂಸ್ಥೆಗಳನ್ನು ಹೊರತುಪಡಿಸಿ (IISC, NIT, IIT, IIIT) ಇತರೆ ಯಾವುದೇ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಗೇಟ್ ಪರೀಕ್ಷೆಯ ಅಂಕಗಳು ಕಡ್ಡಾಯವಾಗಿರುತ್ತವೆ.
* PMRAF ಯೋಜನೆ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧನೆಯ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೆ, ಸಂಶೋಧನೆಯಲ್ಲಿನ ಉತ್ತಮ ಪ್ರತಿಭೆಗಳನ್ನು ಆಕರ್ಷಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.