AIIB ಭಾರತಕ್ಕೆ 500 ಮಿಲಿಯನ್ USD ನೀಡಲು ಅನುಮೋದನೆ
Published by Basavaraj Halli
10 ಮೇ 2020
ಎಐಐಬಿ (ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್) ಭಾರತಕ್ಕೆ ಕೋರೋಣ ವೈರಸ್ ವಿರುದ್ಧ ಹೋರಾಡಲು ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರು ಮೊತ್ತದಷ್ಟು ಹಣವನ್ನು ನೀಡಲು ಅನುಮೋದನೆ ನೀಡಿದೆ.
AIIB ನೀಡುವ ಈ ಹಣವನ್ನು ಕೋರೋಣ ಸೋಂಕಿನ ವಿರುದ್ಧ ಹೋರಾಟದ ಭಾಗವಾಗಿ ತುರ್ತು ಚಿಕಿತ್ಸೆ, ಆರೋಗ್ಯ ವ್ಯವಸ್ಥೆಗಳ ಸುಧಾರಣೆ ಸೇರಿದಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ನಡೆಸುತ್ತಿರುವ ಸಂಶೋಧನೆಗಳನ್ನು ಉತ್ತೇಜಿಸಲು ಈ ಹಣವನ್ನು ಬಳಸಲಾಗುತ್ತದೆ.