ಕೊರೋನ ಪ್ರಕೃತಿಯಲ್ಲಿ ಸಹಜವಾಗಿ ವಿಕಾಸಗೊಂಡ ವೈರಸ್ : ಆಯಂಟನಿ ಫೌಸಿ
Published by Basavaraj Halli
07 ಮೇ 2020
ಜಿನೀವ (ಸ್ವಿಟ್ಸರ್‌ಲ್ಯಾಂಡ್) : ಜಗತ್ತಿನಾದ್ಯಂತ ಮಾರಕವಾಗಿ ವ್ಯಾಪಿಸುತ್ತಿರುವ ಕೊರೋನ ವೈರಸ್ ಚೀನಾ ದೇಶದ ವುಹಾನ್ ನಗರದ ಪ್ರಯೋಗಾಲಯವೊಂದರಲ್ಲಿ ಕೃತಕವಾಗಿ ಸೃಷ್ಟಿಸಲಾಗಿದೆ ಎಂದು ಅಮೆರಿಕಾವು ಆರೋಪಿಸುತ್ತ ಬಂದಿರುವ ಹಿನ್ನಲೆಯಲ್ಲಿ ಅಮೆರಿಕದವರೇಯಾದ ಸಾಂಕ್ರಾಮಿಕ ರೋಗಗಳ ತಜ್ಞ ಆಯಂಟನಿ ಫೌಸಿ ಅವರು "ಕೋರೋಣ ಸೋಂಕು ಪ್ರಕೃತಿಯಲ್ಲಿ ಸಹಜವಾಗಿಯೇ ವಿಕಾಸಗೊಂಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋರೋಣ ವೈರಸ್ ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟಿದೆ ಎನ್ನುವುದಕ್ಕೆ ಸಾಕ್ಷಿಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಅಭಿಪ್ರಾಯ ವ್ಯಕ್ತಪಡಿಸಿದೆ.