ಜನಪ್ರಿಯ "ದುಬೈ ಎಕ್ಸ್ ಪೋ 2020" ಒಂದು ವರ್ಷ ಮುಂದೂಡಿಕೆ
Published by Basavaraj Halli
05 ಮೇ 2020
ದುಬೈ: ಜಗತ್ತಿನ ವಿವಿಧ ರಾಷ್ಟ್ರಗಳು ಭಾಗವಹಿಸುವ ಹಾಗು ಸುದೀರ್ಘ ಆರು ತಿಂಗಳುಗಳ ಕಾಲ ನಡೆಯುವ ಜಾಗತಿಕ ಪ್ರಸಿದ್ಧಿಯನ್ನು ಪಡೆದಿರುವ 'ದುಬೈ ಎಕ್ಸ್ ಪೋ'ವನ್ನು ಕೋರೋಣ ವೈರಸ್ ಭೀತಿ ಹಿನ್ನಲೆ ಒಂದು ವರ್ಷಗಳ ಕಾಲ ಮುಂದೂಡಲಾಗಿದೆ.
ಇದೇ ಬರುವ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಈ ಜನಪ್ರಿಯ ಎಕ್ಸ್ ಪೋವನ್ನು ಮುಂದಿನ ವರ್ಷದ ಅಕ್ಟೋಬರ್ 1ರಿಂದ 2022ರ ಮಾರ್ಚ್ 31ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.