ಓಜೋನ್ ಪದರದಲ್ಲಿನ ದೊಡ್ಡ ರಂಧ್ರವು ಸ್ವತಃ ಮುಚ್ಚಿಕೊಂಡಿದೆ
Published by Basavaraj Halli
28 ಏಪ್ರಿಲ್ 2020
C3S (Copernicus Climate Change Service) ಮತ್ತು CAMS (Copernicus Atmosphere Monitoring Service) ಓಜೋನ್ ಪದರದ ರಂಧ್ರವು ಸ್ವತಃ ಗುಣಮುಖವಾಗಿದೆ ಎಂದು ದೃಢಪಡಿಸಿವೆ.
ಓಜೋನ್ ಪದರದ ರಂಧ್ರವು 1 ಮಿಲಿಯನ್ ಚದರ ಕಿಲೋಮೀಟರ್ ನಷ್ಟು ಅಗಲವಿತ್ತು ಮತ್ತು ಈ ರಂಧ್ರವನ್ನು ವಿಜ್ಞಾನಿಗಳು ಮಾರ್ಚ್ 2020 ರಲ್ಲಿ ಗುರುತಿಸಿದ್ದರು. ಅಸಾಮಾನ್ಯವಾದ ಹವಾಮಾನ ಪರಿಸ್ಥಿತಿಗಳಿಂದ ಇದು ರೂಪುಗೊಂಡಿತ್ತು.
* COVID-19 ಲಾಕ್ ಡೌನ್ ಕಾರಣದಿಂದಾಗಿ ಮಾಲಿನ್ಯದ ಮಟ್ಟ ಕಡಿಮೆಯಾಗಿದೆ ಹಾಗು ದ್ರುವ ಸುಳಿಯಿಂದಾಗಿ ರಂಧ್ರವು ಸ್ವತಃ ಮುಚ್ಚಿಕೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಓಜೋನ್ ಪದರ : ಭೂಮಿಯ ವಾಯುಮಂಡಲದ ರಕ್ಷಣಾ ಕವಚವಾಗಿದ್ದು ಅದು ಸೂರ್ಯನಿಂದ ಹಾನಿಕಾರಕ ಯುವಿ ವಿಕಿರಣದಿಂದ ಭೂ ಗ್ರಹವನ್ನು ರಕ್ಷಿಸುತ್ತದೆ.