ಶನಿವಾರ, 11 ಎಪ್ರಿಲ್ 2020
10:38 ಪೂರ್ವಾಹ್ನ
Daily PDF
ಕೊರೋನ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಎಡಿಬಿಯಿಂದ 16,716 ಕೋಟಿ ರೂ. ನೆರವು
Authored by:
Basavaraj Halli
ನವದೆಹಲಿ : ದೇಶದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡಲು ಹಾಗೂ ಆರ್ಥಿಕ ದುಷ್ಪರಿಣಾಮವನ್ನು ಎದುರಿಸಲು, ಭಾರತಕ್ಕೆ ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ 2.2 ಶತಕೋಟಿ ಡಾಲರ್ (ಸುಮಾರು 16,716 ಕೋಟಿ ರೂ.)ಗಳ ನೆರವನ್ನು ನೀಡಿದೆ.
ಏಶ್ಯ ಅಭಿವೃದ್ಧಿ ಬ್ಯಾಂಕ್ (ADB) ನ ಅಧ್ಯಕ್ಷರಾದ ಮಸಾಟಾಗು ಅಸಾಕಾವಾ ಅವರು ದಿನಾಂಕ 10 ಏಪ್ರಿಲ್ 2020 ರಂದು ಭಾರತದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರೆ ಮಾಡಿ ಭಾರತಕ್ಕೆ ಈ ಬೃಹತ್ ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.