ಶನಿವಾರ, 11 ಎಪ್ರಿಲ್ 2020
8:25 ಅಪರಾಹ್ನ
Daily PDF
KSRTC ಯಿಂದ ಮೊಬೈಲ್ ಸ್ಯಾನಿಟೈಸರ್ ಬಸ್ "ಸಾರಿಗೆ ಸಂಜೀವಿನಿ"ಗೆ ಚಾಲನೆ
Authored by:
Basavaraj Halli
ಬೆಂಗಳೂರು: ಕೋರೋಣ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ವಿವಿಧ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ಬಸ್ ಅನ್ನೇ ಮೊಬೈಲ್ ಸ್ಯಾನಿಟೈಸರ್ ಆಗಿ ಪರಿವರ್ತನೆ ಮಾಡುವ ಮೂಲಕ "ಸಾರಿಗೆ ಸಂಜೀವಿನಿ" ಎಂಬ ಕಾರ್ಯಕ್ರಮ ಆರಂಭಿಸಿದೆ.
* ಸುಮಾರು ಹತ್ತು ವರ್ಷದ ಹಳೆಯ ಬಸ್ ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಲಾಗಿದೆ.
* ಒಂದು ಸಾರಿಗೆ ಸಂಜೀವಿನಿ ಬಸ್ ತಯಾರಿಸಲು 20 ಸಾವಿರ ವೆಚ್ಚ
* ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭದಲ್ಲಿ ಬೆಂಗಳೂರಿನಲ್ಲಿ ಸ್ಯಾನಿಟೈಸರ್ ಬಸ್ ಸಂಚರಿಸಲಿವೆ.
* ಬಸ್ ಮುಂಭಾಗ ಹತ್ತಿ ಹಿಂಭಾಗ ಇಳಿದರೆ ಸಂಪೂರ್ಣವಾಗಿ ದೇಹಕ್ಕೆ ಸೋಂಕು ನಿರೋಧಕ ಸಿಂಪಡಣೆ ಆಗಲಿದೆ.
* ಬೆಂಗಳೂರು ನಗರದಲ್ಲಿ ಪೊಲೀಸ್, ಮೆಡಿಕಲ್, ಪೌರ ಸಿಬ್ಬಂದಿಗಳ ಅನುಕೂಲಕ್ಕಾಗಿ ಈ ಬಸ್ ಸಂಚರಿಸಲಿದೆ