ಶುಕ್ರವಾರ, 10 ಎಪ್ರಿಲ್ 2020
5:15 ಅಪರಾಹ್ನ
Daily PDF
Hydroxychloroquine ಔಷಧಿಯನ್ನು 25 ದೇಶಗಳಿಗೆ ರಪ್ತುಮಾಡಲು ಭಾರತ ಸಮ್ಮತಿ
Authored by:
Basavaraj Halli
ನವದೆಹಲಿ: ಮಲೇರಿಯಾ ರೋಗಕ್ಕೆ ಬಳಸುವ Hydroxychloroquine ಔಷಧಿ ಕರೋನ ವೈರಸ್ ಗೆ ಸೋಂಕಿತರರಿಗೆ ಚಿಕಿತ್ಸೆ ನೀಡಲು ಉತ್ತಮವಾದುದರಿಂದ ವಿವಿಧ 30 ದೇಶಗಳಿಂದ ಈ ಔಷಧಿಗಾಗಿ ಬೇಡಿಕೆ ಬಂದಿದ್ದರ ಹಿನ್ನಲೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಕೇಳುವ 25 ದೇಶಗಳ ಮನವಿಯನ್ನು ಭಾರತ ಅಂಗೀಕರಿಸಿ ಔಷದಿ ರಫ್ತು ಮಾಡಲು ಅನುಮೋದನೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
* ಭಾರತದಲ್ಲಿರುವ ಒಟ್ಟು ಸಂಗ್ರಹವನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
* US ಸೇರಿದಂತೆ ಒಟ್ಟು 30 ದೇಶಗಳು ಈ ಔಷಧವನ್ನು ಗೇಮ್ ಚೇಂಜರ್ ಎಂದು ಕರೆದಿವೆ.
* US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲಿನ್ ಅಧ್ಯಕ್ಷ ಜೈರ್ ಎಂ ಬೋಲ್ಸನಾರೊ ಅವರು ವಿನಂತಿಗಳನ್ನು ಅಂಗೀಕರಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.