ಶುಕ್ರವಾರ, 10 ಎಪ್ರಿಲ್ 2020
8:39 ಪೂರ್ವಾಹ್ನ
Daily PDF
COVID-19 ವಿರುದ್ಧ ಹೋರಾಡಲು ಸ್ವಚ್ಛತಾ ಆಯಪ್'ನ ನೂತನ ಆವೃತ್ತಿ ಆರಂಭ
Authored by:
Basavaraj Halli
ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದಿನಾಂಕ ಏಪ್ರಿಲ್ 9, 2020 ರಂದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ಸ್ವಚ್ಛತಾ ಆಯಪ್ ನ ಪರಿಸ್ಕ್ರುತ ಆವೃತ್ತಿಯನ್ನು ಬಿಡುಗಡೆಗೊಳಿಸಿತು.
ನೂತನ ಆವೃತ್ತಿ :
* ಭಾರತದಾದ್ಯಂತ 1.7 ಕೋಟಿಗಿಂತ ಅಧಿಕ ನಗರ ಬಳಕೆದಾರರನ್ನು ಒಳಗೊಂಡಿದೆ.
* ಪರಿಷ್ಕೃತ ಅಪ್ಲಿಕೇಶನ್ 9 ಹೆಚ್ಚುವರಿ ವಿಭಾಗಗಳನ್ನು ಒಳಗೊಂಡಿದೆ:
- COVID-19 ಸಮಯದಲ್ಲಿ ನೈರ್ಮಲ್ಯಕ್ಕಾಗಿ ವಿನಂತಿ
- COVID-19 ಸಮಯದಲ್ಲಿ Quarantine ಉಲ್ಲಂಘಿಸುವುದು
- COVID-19 ಸಮಯದಲ್ಲಿ ಲಾಕ್‌ಡೌನ್ ಉಲ್ಲಂಘನೆ
- COVID-19 ರ ಶಂಕಿತ ಪ್ರಕರಣವನ್ನು ವರದಿ ಮಾಡುವದು
- COVID-19 ಸಮಯದಲ್ಲಿ ಆಹಾರವನ್ನು ವಿನಂತಿ
- COVID-19 ಸಮಯದಲ್ಲಿ ಆಶ್ರಯಕ್ಕಾಗಿ ವಿನಂತಿ
- COVID-19 ಸಮಯದಲ್ಲಿ ಔಷಧಿಯನ್ನು ವಿನಂತಿಸಿ
- COVID-19 ರೋಗಿಗಳ ಸಾರಿಗೆಗೆ ಸಹಾಯಕ್ಕಾಗಿ ವಿನಂತಿ
- Quarantine ಪ್ರದೇಶದಿಂದ ತ್ಯಾಜ್ಯ ಎತ್ತಿಕೊಳ್ಳುವಿಕೆಗಾಗಿ ವಿನಂತಿ