ಗುರುವಾರ, 09 ಎಪ್ರಿಲ್ 2020
9:12 ಪೂರ್ವಾಹ್ನ
Daily PDF
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ: 400 ಮಿಲಿಯನ್ ಭಾರತೀಯ ಕಾರ್ಮಿಕರು ಬಡತನಕ್ಕೊಳಗಾಲಿದ್ದಾರೆ
Authored by:
Basavaraj Halli
ದಿನಾಂಕ ಏಪ್ರಿಲ್ 8, 2020 ರಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು “COVID-19 ಮತ್ತು ಕೆಲಸದ ಪ್ರಪಂಚ”(COVID-19 and world of work) ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ಕೋವಿದ್-19 ನಿಂದಾಗಿ ಬಡತನಕ್ಕೊಳಗಾಗಲಿದ್ದಾರೆ ಎಂದು ಉಲ್ಲೇಖಿಸಿದೆ.
ಮುಖ್ಯಾಂಶಗಳು
ಕೋವಿಡ್-19 ನಿಂದಾಗಿ ಜಾಗತಿಕವಾಗಿ ಸುಮಾರು 195 ಮಿಲಿಯನ್ ಪೂರ್ಣ ಪ್ರಮಾಣದ ಉದ್ಯೋಗಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವಿಶ್ವಸಂಸ್ಥೆಯ ಕಾರ್ಮಿಕ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಎಚ್ಚರಿಸಿದೆ.
* ಅರಬ್ ದೇಶಗಳಲ್ಲಿ ಸುಮಾರು 5 ಮಿಲಿಯನ್ ನಷ್ಟು ಜನ ಪೂರ್ಣ ಸಮಯದ ಕೆಲಸಗಾರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
* ಪೆಸಿಫಿಕ್ ಮತ್ತು ಏಷ್ಯಾದಲ್ಲಿ ಸುಮಾರು 125 ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
* ಅಮೆರಿಕ ಮತ್ತು ಆಫ್ರಿಕಾದಲ್ಲಿ ನಿರುದ್ಯೋಗದ ಅಪಾಯದ ಶೇಕಡಾವಾರು ಕ್ರಮವಾಗಿ 43% ಮತ್ತು 26% ಆಗಿದೆ.