ಬುಧವಾರ, 08 ಎಪ್ರಿಲ್ 2020
8:23 ಅಪರಾಹ್ನ
Daily PDF
Covid-19 ಪರೀಕ್ಷೆಯನ್ನು ಉಚಿತವಾಗಿ ಮಾಡುವಂತೆ ಕೇಂದ್ರಕ್ಕೆ ಸುಪ್ರಿಂ ಸೂಚನೆ
Authored by:
Basavaraj Halli
ನವದೆಹಲಿ : ಕೋವಿಡ್-19 ಸೋಂಕಿನ ಪರೀಕ್ಷಾ ಸೌಲಭ್ಯವನ್ನು ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹ ನೀಡಿದೆ. ಪ್ರಸ್ತುತ, ಖಾಸಗಿ ಪ್ರಯೋಗಾಲಗಳಿಗೆ ಕರೋನವೈರಸ್ (ಕೋವಿಡ್ -19) ಸೋಂಕು ಪರೀಕ್ಷಿಸಲು ಅವಕಾಶವಿದ್ದು ಪ್ರತಿ ಪರೀಕ್ಷೆಗೆ 4500 ರೂಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇನ್ನು ಎಲ್ಲ ಸರ್ಕಾರೀ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ.
* ಖಾಸಗಿ ಲ್ಯಾಬ್‌ಗಳನ್ನು ಕರೋನವೈರಸ್ ಪರೀಕ್ಷೆ ಮಾಡಿಸಿಕೊಳ್ಳುವ ಜನರಿಗೆ ಶುಲ್ಕ ಮರುಪಾವತಿಸುವಂತೆ ನ್ಯಾಯಾಧೀಶರಾದ ಅಶೋಕ್ ಭೂಷಣ್ ಮತ್ತು ಎಸ್ ರವೀಂದ್ರ ಭಟ್ ಅವರನೊಳಗೊಂಡ ನ್ಯಾಯಪೀಠವು ಸೂಚನೆ ನೀಡಿದೆ.