ಸೋಮವಾರ, 06 ಎಪ್ರಿಲ್ 2020
8:34 ಪೂರ್ವಾಹ್ನ
Daily PDF
ಹಲ್ದಿರಾಮ್ ಭುಜಿಯಾವಾಲಾ ಸ್ನ್ಯಾಕ್ಸ್ ಸಂಸ್ಥೆಯ ಮಾಲೀಕ ಮಹೇಶ್ ಅಗರ್ವಾಲ್ ನಿಧನ
Authored by:
Basavaraj Halli
ಕೋಲ್ಕತ: ಭಾರತದಾಧ್ಯಂತ ಪ್ರಸಿದ್ಧವಾಗಿರುವ 'ಹಲ್ದಿರಾಮ್ ಭುಜಿಯಾವಾಲಾ' ಸ್ನ್ಯಾಕ್ಸ್ ಸಂಸ್ಥೆಯ ಮಾಲೀಕರಾದ ಮಹೇಶ್ ಅಗರ್ವಾಲ್ ಅವರು ಶುಕ್ರವಾರ(ಏಪ್ರಿಲ್ 03) ದಂದು ಸಿಂಗಾಪುರ್ನಲ್ಲಿ ವಿಧಿವಶರಾದರು. ಇವರು ಲಿವರ್ ಕಾಯಿಲೆಯಿಂದ ಬಳಲುತ್ತಿದ್ದರು.
ಹಲ್ದಿರಾಮ್ ಭುಜಿಯಾವಾಲಾ:
"ಹಲ್ದಿರಾಮ್" ಅನ್ನು 1937 ರಲ್ಲಿ ಶ್ರೀ ಗಂಗಾ ಭೀಷೆನ್ ಅಗರ್ವಾಲ್ ಅವರು ಸ್ಥಾಪಿಸಿದರು,
ಹಲ್ಡಿರಾಮ್ಸ್ ಪ್ರಮುಖವಾಗಿ ಆಲೂಗೆಡ್ಡೆ ಚಿಪ್ಸ್ ಸೇರಿ ಭಾರತೀಯ ಸಿಹಿತಿಂಡಿಗಳ ತಯಾರಕ ಸಂಸ್ಥೆಯಾಗಿದೆ. ಕಂಪನಿಯು ನಾಗ್ಪುರ, ನವದೆಹಲಿ, ಗುರಗಾಂವ್, ರುದ್ರಪುರ ಮತ್ತು ನೋಯ್ಡಾದಂತಹ ವಿವಿಧ ಸ್ಥಳಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ.