ಶನಿವಾರ, 04 ಎಪ್ರಿಲ್ 2020
9:01 ಪೂರ್ವಾಹ್ನ
Daily PDF
ಆರೋಗ್ಯ ಸಂಜೀವನಿ ವಿಮಾ ಪಾಲಿಸಿ: IRDIA ಯಿಂದ ಮಾರ್ಗಸೂಚಿಗಳ ಬಿಡುಗಡೆ
Authored by:
Basavaraj Halli
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವು ಆರೋಗ್ಯ ಸಂಜೀವನಿ ವಿಮಾ ಪಾಲಿಸಿಯನ್ನು ಜಾರಿಗೆ ತರಲು ಯೋಜಿಸಿದ್ದು, ಈ ಯೋಜನೆಯ ಆರೋಗ್ಯ ವಿಮಾ ಪೂರೈಕೆದಾರರಿಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ನೀತಿಯ ಬಗ್ಗೆ
“ಆರೋಗ್ಯ ಸಂಜೀವನಿ ವಿಮಾ ಪಾಲಿಸಿ” ನೀತಿಯನ್ನು ಆರಂಭಿಸಿದ ಮೂಲ ಮುಖ್ಯ ಉದ್ದೇಶವು COVID-19 ರೋಗಿಗಳ ಆಸ್ಪತ್ರೆಗೆ ದಾಖಲು ಮಾಡುವ ವೆಚ್ಚವನ್ನು ಭರಿಸುವುದಾಗಿದೆ.
ಈ ನೀತಿಯನ್ನು ಭಾರತ ಸರ್ಕಾರ ರೂಪಿಸಿಲ್ಲ ಬದಲಿಗೆ ಈ ಪಾಲಿಸಿಗೆ ಮಾರ್ಗಸೂಚಿಗಳನ್ನು ಸೂಚಿಸಿದೆ. ಒಟ್ಟು 29 ಆರೋಗ್ಯ ಮತ್ತು ವಿಮಾ ಕಂಪನಿಗಳ ಪಾಲಿಸಿಗಳನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಅನುಮೋದಿಸಿದೆ.