ಶನಿವಾರ, 04 ಎಪ್ರಿಲ್ 2020
9:31 ಪೂರ್ವಾಹ್ನ
Daily PDF
COVID-19 ಹರಡುವಿಕೆಯನ್ನು ತಡೆಯಲು ಭಾರತ ಸರ್ಕಾರದಿಂದ 5 ಸಂಶೋಧನಾ ಯೋಜನೆಗಳ ಪ್ರಾರಂಭ
Authored by:
Siddaram Halli
ದೇಶದಲ್ಲಿ ವ್ಯಾಪಿಸುತ್ತಿರುವ ಕರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರವು 5 ಹೊಸ ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳು ಲಸಿಕೆಗಳು ಅಥವಾ ಔಷಧಿಗಳನ್ನು ಅಭಿವೃದ್ಧಿ ಪಡಿಸುವತ್ತ ಹೆಚ್ಚಿನ ಗಮನಹರಿಸುವದಿಲ್ಲ. ಬದಲಿಗೆ COVID-19 ಹರಡುವಿಕೆಯನ್ನು ತಗ್ಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವದು. ಈ ಯೋಜನೆಗಳು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ವಹಿಸಲಿದೆ.