ಬುಧವಾರ, 25 ಮಾರ್ಚ್ 2020
11:18 ಪೂರ್ವಾಹ್ನ
Daily PDF
ಕೊರೊನಾ ವೈರಸ್ ಭೀತಿ : 21 ದಿನ ಸಂಪೂರ್ಣ ಲಾಕ್ ಡೌನ್ ಆದ ಭಾರತ
Authored by:
Basavaraj Halli
ನವದೆಹಲಿ: ಭಾರತದಾದ್ಯಂತ ಹೆಚ್ಚುತ್ತಿರುವ ಕೊರೊನಾವೈರಸ್ ಪೀಡಿತರ ಸಂಖ್ಯೆಯನ್ನು ನಿಯಂತ್ರಿಸಲು ಪ್ರಧಾನಿ ಮೋದಿಯವರು 24 ಮಾರ್ಚ್ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲರು ಮನೆಮುಂದೆ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಇರಬೇಕು. ಅದನ್ನು ಯಾವುದೇ ಕಾರಣಕ್ಕೂ ದಾಟಬಾರದು ಎಂದು ಜನರಿಗೆ ಮನವಿ ಮಾಡಿದ್ದಾರೆ.
ಇದೆ ಸಮಯದಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ 21 ದಿನಗಳವರೆಗೆ ಲಾಕ್ ಡೌನ್ ಮಾಡಲಾಗಿದೆ.