ಬುಧವಾರ, 25 ಮಾರ್ಚ್ 2020
8:17 ಪೂರ್ವಾಹ್ನ
Daily PDF
ರಾಜ್ಯದ "ಬಡವರ ಬಂಧು ಯೋಜನೆ"ಯ ಸಾಲ ಮನ್ನಾ
Authored by:
Basavaraj Halli
ಬೆಂಗಳೂರು: ಕರ್ನಾಟಕದ ಬೀದಿ ಬದಿ ವ್ಯಾಪಾರ ಮಾಡುವವರಿಗೆ ನೀಡುವ ಕಿರುಸಾಲದ ಯೋಜನೆಯಾದ "ಬಡವರ ಬಂಧು ಯೋಜನೆ"ಯ ಸಾಲವನ್ನು ಮನ್ನಾ ಮಾಡಲಾಗುವುದೆಂದು ಮುಖ್ಯಮಂತ್ರಿ B S ಯಡಿಯೂರಪ್ಪ ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು. ಈ ಯೋಜನೆಯ ಒಟ್ಟು 13.20 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
* ಇದೇ ವೇಳೆ ಎರಡು ವಿಧೇಯಕಗಳ ಅಂಗೀಕಾರ ಮಾಡಲಾಯಿತು. ಫೈನಾನ್ಸ್ ಬಿಲ್ ಹಾಗೂ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಗಳಿಗೆ ಅಂಗೀಕಾರ ನೀಡಲಾಯಿತು.