ಬುಧವಾರ, 25 ಮಾರ್ಚ್ 2020
11:19 ಪೂರ್ವಾಹ್ನ
Daily PDF
ಕೊರೊನಾ ವೈರಸ್ : ₹15 ಸಾವಿರ ಕೋಟಿ ಘೋಷಿಸಿದ ಪ್ರಧಾನಿ ಮೋದಿ
Authored by:
Basavaraj Halli
ನವದೆಹಲಿ : ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಬರುವ 21 ದಿನಗಳ ಕಾಲ ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೆ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ₹15,000 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಈ ಮೀಸಲು ಹಣವನ್ನು ಕೊರೊನಾವೈರಸ್ ಪರೀಕ್ಷಾ ಕೇಂದ್ರಗಳು, ಪ್ರತ್ಯೇಕ ವಾರ್ಡ್ಸ್, ಹಾಸಿಗೆಗಳ ಸೌಲಭ್ಯ, ಐಸಿಯುಗಳು, ವೆಂಟಿಲೇಟರ್‌ಗಳು ಮತ್ತು ತರಬೇತಿ ನೀಡುವ ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಮೀಸಲಿಡಲಾಗಿಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.