ರವಿವಾರ, 22 ಮಾರ್ಚ್ 2020
5:30 ಪೂರ್ವಾಹ್ನ
Daily PDF
ನಿರ್ಭಯಾ ಹಂತಕರಿಗೆ ಗಲ್ಲು ಹಿನ್ನಲೆ ಮರಣದಂಡನೆ ಶಿಕ್ಷೆ ರದ್ದುಗೊಳಿಸಲು ವಿಶ್ವಸಂಸ್ಥೆ ಕರೆ
Authored by:
Basavaraj Halli
ಯುನೈಟೆಡ್ ನೇಷನ್ಸ್: ಭಾರತದಲ್ಲಿ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಇತ್ತೀಚಿಗೆ ಗಲ್ಲುಶಿಕ್ಷೆ ವಿಧಿಸಿ ನೇಣಿಗೇರಿಸಿದ ಒಂದು ದಿನದ ನಂತರ ಮರಣದಂಡನೆ ಶಿಕ್ಷೆಯನ್ನು ನಿಲ್ಲಿಸುವಂತೆ ಅಥವಾ ಅದರ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
ಭಾರತದಲ್ಲಿ ಯುವ ವೈದ್ಯಕೀಯ ವಿದ್ಯಾರ್ಥಿನಿಯಾದ ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ನಡೆಸಿದ 4 ಆರೋಪಿಗಳಿಗೆ ಶುಕ್ರವಾರ ಮುಂಜಾನೆ ಮರಣದಂಡನೆ ಶಿಕ್ಷೆಯಾಗಿದೆ.
ಈ ಶಿಕ್ಷೆ ಕುರಿತು ಪ್ರತಿಕ್ರಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಕ್ತಾರರು "ವಿಶ್ವವ್ಯಾಪಿ ಮರಣದಂಡನೆ ಶಿಕ್ಷೆ ಜಾರಿಯನ್ನು ರದ್ದುಗೊಳಿಸಬೇಕು ಇಲ್ಲವೇ ಅದರ ಮೇಲೆ ನಿಷೇಧ ಹೇರಬೇಕು" ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ.