ರವಿವಾರ, 15 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮೃದಂಗ ವಿದ್ವಾನ್ ಟಿ.ಎ.ಎಸ್. ಮಣಿ ನಿಧನ
Authored by:
Basavaraj Halli
ಬೆಂಗಳೂರು: ಖ್ಯಾತ ಮೃದಂಗ ವಿದ್ವಾನ್ ಟಿ.ಎ.ಎಸ್. ಮಣಿ (84) ಅವರು ಮೃತಪಟ್ಟಿದ್ದಾರೆ.
ಅಂತರರಾಷ್ಟ್ರೀಯ ಖ್ಯಾತಿಯ ಲಯವಾದ್ಯ ಗೋಷ್ಠಿಯಾದ 'ತಾಳ ತರಂಗಿಣಿ' ಪ್ರಾರಂಭಿಸಿದ್ದರು, ಮತ್ತು ದೇಶದ ಅನೇಕ ಕಡೆ ಪ್ರದರ್ಶಿಸಿದರು.
ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ 'ಗಾನ ಕಲಾ ಭೂಷಣ' ಗೌರವ ಸೇರಿದಂತೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹಲವು ಪ್ರಶಸ್ತಿಗಳು ಗೌರವಗಳು ಇವರಿಗೆ ಸಂದಿವೆ.