➤ ಪ್ರತಿ ವರ್ಷ ನವೆಂಬರ್ 9 ರಂದು ಭಾರತದಾದ್ಯಂತ ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು (National Legal Services Day) ಆಚರಿಸಲಾಗುತ್ತದೆ. ಸಮಾಜದ ಹಿಂದುಳಿದ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಹಾಗೂ ವಿಶೇಷಚೇತನರಿಗೆ ಉಚಿತ ಕಾನೂನು ನೆರವು ಒದಗಿಸುವ ಮತ್ತು ನ್ಯಾಯ ಪ್ರಕ್ರಿಯೆಯನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಈ ದಿನ ಪ್ರಮುಖವಾಗಿದೆ.
➤ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ 1987ರ ಹಿನ್ನೆಲೆ: ಭಾರತೀಯ ಸಂವಿಧಾನದ ವಿಧಿ 39 ಎ (Article 39A) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ಸಿಗಬೇಕು ಎಂಬುದನ್ನು ಖಾತ್ರಿಪಡಿಸಲಾಗಿದೆ. ಈ ಆಶಯವನ್ನು ಈಡೇರಿಸಲು 1987ರಲ್ಲಿ 'ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ' (Legal Services Authorities Act, 1987) ಅನ್ನು ರೂಪಿಸಲಾಯಿತು.
- ಕಾಯಿದೆ ಜಾರಿಗೆ ಬಂದಿದ್ದು: ಈ ಕಾಯಿದೆಗೆ ತಿದ್ದುಪಡಿ ತಂದ ಬಳಿಕ 1995ರ ನವೆಂಬರ್ 9 ರಂದು ಇದು ದೇಶಾದ್ಯಂತ ಜಾರಿಗೆ ಬಂದಿತು. ಆದ್ದರಿಂದ ಪ್ರತಿವರ್ಷ ನವೆಂಬರ್ 9 ಅನ್ನು ಈ ದಿನವಾಗಿ ಆಚರಿಸಲಾಗುತ್ತದೆ.
- ಪ್ರಾಧಿಕಾರದ ಸ್ಥಾಪನೆ: ಸುಪ್ರೀಂ ಕೋರ್ಟ್‌ನ ಆಗಿನ ನ್ಯಾಯಮೂರ್ತಿ ಆರ್. ಎನ್. ಮಿಶ್ರಾ ಅವರ ನೇತೃತ್ವದಲ್ಲಿ 1995ರ ಡಿಸೆಂಬರ್ 5 ರಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು (NALSA) ಜಾರಿಗೆ ತರಲಾಯಿತು.
➤ ಉಚಿತ ಕಾನೂನು ನೆರವು ಪಡೆಯಲು ಯಾರು ಅರ್ಹರು?
ಈ ಕಾಯಿದೆಯಡಿ ಉಚಿತ ಕಾನೂನು ಸಲಹೆ, ಮಾರ್ಗದರ್ಶನ ಮತ್ತು ನ್ಯಾಯಾಲಯದ ವೆಚ್ಚದಿಂದ ವಿನಾಯಿತಿ ಪಡೆಯಲು ಕೆಳಗಿನವರು ಅರ್ಹರಾಗಿರುತ್ತಾರೆ:
- ಮಹಿಳೆಯರು ಮತ್ತು ಮಕ್ಕಳು
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಸಮುದಾಯದವರು
- ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ನಾಗರಿಕರು
- ವಿಶೇಷಚೇತನರು ಮತ್ತು ಮಾನಸಿಕ ಅಸ್ವಸ್ಥರು
- ನೈಸರ್ಗಿಕ ವಿಕೋಪ, ಕೈಗಾರಿಕಾ ದುರಂತ ಅಥವಾ ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತರು
➤ ಲೋಕ್ ಅದಾಲತ್ ಮತ್ತು ವ್ಯಾಜ್ಯಗಳ ಸೌಹಾರ್ದಯುತ ಪರಿಹಾರ: ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳು (NALSA/SALSA/DALSA) ಉಚಿತ ಸೇವೆಯ ಜೊತೆಗೆ ರಾಷ್ಟ್ರೀಯ ಲೋಕ್ ಅದಾಲತ್ (National Lok Adalats) ಮೂಲಕ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತವೆ.
- ವ್ಯಾಜ್ಯಗಳ ಇತ್ಯರ್ಥ: ಕಳೆದ 10 ವರ್ಷಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‌ಗಳ ಮೂಲಕ 34 ಕೋಟಿಗೂ ಹೆಚ್ಚು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.
- ಕೌಟುಂಬಿಕ ಮತ್ತು ಆಸ್ತಿ ವಿವಾದ: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಟ್ಟದಲ್ಲೂ ಕೌಟುಂಬಿಕ ಹಾಗೂ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಕೋರ್ಟ್ ಮೆಟ್ಟಿಲೇರದೆ ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಈ ವ್ಯವಸ್ಥೆ ಸಹಕಾರಿಯಾಗಿದೆ.