➤ ಉತ್ತರಾಖಂಡ ರಾಜ್ಯವು ತನ್ನ 26ನೇ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಪ್ರಮುಖ ನಾಯಕರು ದೇವಭೂಮಿಯ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
➤ ಪ್ರಧಾನಿ ಮೋದಿ ಮತ್ತು ಪ್ರಮುಖ ನಾಯಕರ ಸಂದೇಶ:
ಉತ್ತರಾಖಂಡ ಸಂಸ್ಥಾಪನಾ ದಿನದ ಪ್ರಯುಕ್ತ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, "ಉತ್ತರಾಖಂಡವು ಆಧ್ಯಾತ್ಮಿಕತೆ ಹಾಗೂ ನಿಸರ್ಗ ಸೌಂದರ್ಯದ ಅಪೂರ್ವ ಸಂಗಮವಾಗಿರುವ ದೇವಭೂಮಿಯಾಗಿದೆ. ಇಲ್ಲಿನ ಶ್ರಮಜೀವಿ ಹಾಗೂ ಸೌಮ್ಯ ಸ್ವಭಾವದ ಜನರ ನಿರಂತರ ಶ್ರಮದಿಂದ ರಾಜ್ಯವು ಇಂದು ಸಾಗುತ್ತಿರುವ ಅಭಿವೃದ್ಧಿಯ ಹಾದಿ ಪ್ರಶಂಸನೀಯ" ಎಂದು ಬಣ್ಣಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, "ಪ್ರಧಾನಿ ಮೋದಿಯವರ ಮಾರ್ಗದರ್ಶನ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಮರ್ಥ ನೇತೃತ್ವದಲ್ಲಿ ಉತ್ತರಾಖಂಡವು ಹೊಸ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಆಡಳಿತದಲ್ಲಿ ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ" ಎಂದು ಅಭಿನಂದಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸರ್ಕಾರದ ಬೆಂಬಲ ಮತ್ತು ಪ್ರಧಾನಿ ಮೋದಿಯವರ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸಿದ್ದು, ರಾಜ್ಯವನ್ನು ಮುಂಚೂಣಿ ಸಾಲಿನಲ್ಲಿ ನಿಲ್ಲಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
➤ ಉತ್ತರಾಖಂಡ ರಾಜ್ಯ ರಚನೆಯ ಇತಿಹಾಸ: ಉತ್ತರಾಖಂಡದ ರಚನೆಯು ದಶಕಗಳ ಕಾಲ ನಡೆದ ಸುದೀರ್ಘ ಹೋರಾಟ ಮತ್ತು ಜನಾಗ್ರಹದ ಫಲವಾಗಿದೆ:
| ಮುಖ್ಯಾಂಶಗಳು | ವಿವರಣೆ |
| ಸ್ಥಾಪನೆಯ ದಿನಾಂಕ | 2000ರ ನವೆಂಬರ್ 9 |
| ಸ್ಥಾನಮಾನ | ಉತ್ತರ ಪ್ರದೇಶದಿಂದ ಬೇರ್ಪಟ್ಟು ಭಾರತದ 27ನೇ ರಾಜ್ಯವಾಗಿ ಉದಯ |
| ಆರಂಭಿಕ ಹೆಸರು | ಉತ್ನರಾಂಚಲ (2007ರಲ್ಲಿ ಉತ್ತರಾಖಂಡ ಎಂದು ಮರುನಾಮಕರಣ) |
| ರಾಜಧಾನಿ | ಡೆಹ್ರಾಡೂನ್ (ಶೀತಲಕಾಲೀನ), ಗೈರ್ಸೈನ್ (ಬೇಸಿಗೆ ಕಾಲೀನ) |
➤ ಅಭಿವೃದ್ಧಿಯ ಹಾದಿಯಲ್ಲಿ ಉತ್ತರಾಖಂಡ: ಕಳೆದ ಎರಡು ದಶಕಗಳಲ್ಲಿ ಉತ್ತರಾಖಂಡವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ:
- ಚಾರ್ ಧಾಮ್ ಪ್ರಾಜೆಕ್ಟ್: ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ಸಂಪರ್ಕಿಸುವ ಚಾರ್ ಧಾಮ್ ಹೆದ್ದಾರಿ ಯೋಜನೆ ಮತ್ತು ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗ ಕಾಮಗಾರಿಗಳು ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದಿವೆ.
- ಸಾಹಸ ಹಾಗೂ ಪರಿಸರ ಪ್ರವಾಸೋದ್ಯಮ: ಹಿಮಾಲಯದ ತಪ್ಪಲಿನಲ್ಲಿರುವ ಈ ರಾಜ್ಯವು ಟ್ರೆಕ್ಕಿಂಗ್, ರಿವರ್ ರೇಫ್ಟಿಂಗ್ ಮತ್ತು ಯೋಗ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
- ಮೂಲಸೌಕರ್ಯ ಮತ್ತು ಸುಡಳಿತ: ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗೆ 'ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಮ್'