ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು (ಪಿಆರ್‌ಸಿಐ) ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂವಹನ ಸಾಧಕರಿಗೆ ಅಥವಾ ಸಂಸ್ಥೆಗಳಿಗೆ ನೀಡುವ ಚಾಣಕ್ಯ ಪ್ರಶಸ್ತಿಗೆ ತರಂಗ ಕನ್ನಡ ವಾರಪತ್ರಿಕೆ ಆಯ್ಕೆಯಾಗಿದೆ. ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಉತ್ಪನ್ನವಾಗಿರುವ ತರಂಗ ವಾರಪತ್ರಿಕೆಯು “ವರ್ಷದ ಸಂವ‌ಹನಕಾರ-ವರ್ಷದ ವಾರ ಪತ್ರಿಕೆ’ಯಾಗಿ ಆಯ್ಕೆಯಾಗಿದೆ. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ 11ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಅವರಿಗೆ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.