➤ ಯುಎನ್ (UN) ಹವಾಮಾನ ಶೃಂಗಸಭೆಯು ಟರ್ಕಿಯ (Türkiye) ಸುಂದರ ಕರಾವಳಿ ನಗರವಾದ ಅಂಟಲ್ಯದಲ್ಲಿ ಸೋಮವಾರ(10-11-2026) ಅಧಿಕೃತವಾಗಿ ಆರಂಭಗೊಂಡಿದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು, ಈ ಹಿಂದಿನ ಹವಾಮಾನ ಬದ್ಧತೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ವಿಶ್ವದ ನಾಯಕರು ಹಾಗೂ ಪ್ರತಿನಿಧಿಗಳು ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
➤ ಶೃಂಗಸಭೆಯ ಪ್ರಮುಖ ಮುಖ್ಯಾಂಶಗಳು:
- ಸಮಯ ಮತ್ತು ಸ್ಥಳ: ನವೆಂಬರ್ 9 ರಿಂದ 20 ರವರೆಗೆ ಟರ್ಕಿಯ ಅಂಟಲ್ಯ ನಗರದಲ್ಲಿ ಈ 31ನೇ ಹವಾಮಾನ ಶೃಂಗಸಭೆ (COP31) ನಡೆಯುತ್ತಿದೆ.
- ಜಂಟಿ ಆತಿಥ್ಯ: ಟರ್ಕಿ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಈ ಸಮಾವೇಶದ ಸಿದ್ಧತೆ ಹಾಗೂ ನೇತೃತ್ವವನ್ನು ವಹಿಸಿದ್ದು, ಅಮೆರಿಕ ಈ ಸಭೆಯಿಂದ ಹೊರಗುಳಿದಿದೆ.
- ಪ್ರಮುಖ ಅಜೆಂಡಾಗಳು:
1. ನವೀಕರಿಸಬಹುದಾದ ಇಂಧನ: ಇರಾನ್ ಬಿಕ್ಕಟ್ಟು ಹಾಗೂ ಹರ್ಮುಜ್ ಜಲಸಂಧಿ ಬಂದ್ ಆಗಿ ತೈಲ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ, ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸುವ ಅನಿವಾರ್ಯತೆ ಇದೆ.
2. ವಿದ್ಯುತ್ ಬಳಕೆ ಗುರಿ: 2035ರ ವೇಳೆಗೆ ಜಾಗತಿಕವಾಗಿ ವಿದ್ಯುತ್ ಬಳಕೆಯನ್ನು ಶೇ. 21ರಿಂದ ಶೇ. 35ಕ್ಕೆ ಹೆಚ್ಚಿಸುವುದು.
3. ಮಿಥೇನ್ ಹೊರಸೂಸುವಿಕೆ ಕಡಿತ: ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿರುವ ಮಿಥೇನ್ ಅನಿಲದ ಬಿಡುಗಡೆಯನ್ನು ತಗ್ಗಿಸುವುದು.
4. ಹಣಕಾಸು ನೆರವು: ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಬದ್ಧತೆಗಳನ್ನು ಈಡೇರಿಸಲು ಅಗತ್ಯವಿರುವ ನಿಧಿ ಒದಗಿಸುವುದು.
➤ ಪ್ಯಾರಿಸ್ ಒಪ್ಪಂದದ ಗುರಿ ಕೈತಪ್ಪುವ ಆತಂಕ: ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವ ಪ್ಯಾರಿಸ್ ಒಪ್ಪಂದದ ಮೂಲ ಗುರಿಯು ಕೈತಪ್ಪುವುದು ಸ್ಪಷ್ಟವಾಗಿದೆ ಎಂದು ಶೃಂಗಸಭೆಯ ಅಧ್ಯಕ್ಷರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಹವಾಮಾನ ವೈಪರೀತ್ಯಗಳು ಹಾಗೂಾ ವಿಪತ್ತುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಶೃಂಗಸಭೆಯು ಅತ್ಯಂತ ನಿರ್ಣಾಯಕ ತಿರುವು ಪಡೆದುಕೊಂಡಿದೆ.
ವಿಶ್ವ ಹವಾಮಾನ ಶೃಂಗಸಭೆ (COP31) ಆರಂಭ: ಜಾಗತಿಕ ತಾಪಮಾನ ತಡೆಗೆ ಅಂಟಲ್ಯದಲ್ಲಿ ಮಹತ್ವದ ಚರ್ಚೆ
Published by Akshata Halli
1 hour ago