ರವಿವಾರ, 08 ಮಾರ್ಚ್ 2020
5:30 ಪೂರ್ವಾಹ್ನ
Daily PDF
ವಿದ್ಯಾರ್ಥಿಗಳಿಗಾಗಿ "ವಿಜಯೀಭವ" ಚಾನೆಲ್ ಮತ್ತು ಮೈತ್ರಿ ಸಹಾಯವಾಣಿ ಆರಂಭ
Authored by:
Basavaraj Halli
ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಕೇಂದ್ರ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು “ವಿಜಯೀಭವ’ ಯೂಟ್ಯೂಬ್ ಚಾನಲ್ ಹಾಗು ಮೈತ್ರಿಗೆ ಚಾಲನೆ ನೀಡಿದರು.
* “ಮೈತ್ರಿ’ ಸಹಾಯವಾಣಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಲಹೆಗಳಿಗಾಗಿ ಮೈತ್ರಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಸ್ಯೆಗಳ ಕುರಿತು ಮಾರ್ಗದರ್ಶನ ಪಡೆಯಬಹುದಾಗಿದೆ.
* “ವಿಜಯೀಭವ" ಯೂಟ್ಯೂಬ್ ಚಾನೆಲ್ : ವಿದ್ಯಾರ್ಥಿಗಳ ವೃತ್ತಿ ಮಾರ್ಗದರ್ಶನ, ಸ್ಫೂರ್ತಿ, ಶೈಕ್ಷಣಿಕ ಮಾಹಿತಿ ಮೂಲಕ ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗುವಂತೆ ಈ ಯುಟ್ಯೂಬ್ ಚಾನೆಲ್ ಆರಂಭಿಸಲಾಗಿದೆ.